
ಹೌದು. ಉಪಹಗ್ರಹವನ್ನು ಹೊತ್ತ PSLV-XLC57 ರಾಕೆಟ್ ನಿಗದಿತ ಕಕ್ಷೆಯಲ್ಲಿ ಸಂಚರಿಸುತ್ತಿದೆ. 3ನೇ ಹಂತದಲ್ಲೂ ರಾಕೆಟ್ನಿಂದ ಯಶಸ್ವಿಯಾಗಿ ನೌಕೆ ಬೇರ್ಪಟ್ಟಿದೆ. ನಂತರ 4ನೇ ಹಂತದಲ್ಲೂ ನೌಕೆ-ರಾಕೆಟ್ ಬೇರ್ಪಡುವ ಕಾರ್ಯ ಯಶಸ್ವಿಯಾಗಿದೆ.
ಸೂರ್ಯಯಾನಕ್ಕೆ ಸೇರಿದ ಉಪಗ್ರಹವನ್ನು ಇಂದು ಬೆಳಿಗ್ಗೆ 11.50 ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ಬಂದರಿನ ಎರಡನೇ ಉಡಾವಣಾ ಪ್ಯಾಡ್ ನಿಂದ ಉಡಾವಣೆ ಮಾಡಲಾಗಿದೆ. ಈ ಮೂಲಕ ಇಸ್ರೋ ವಿಜ್ಞಾನಿಗಳು ಮತ್ತೊಂದು ಸಾಧನೆ ಮಾಡಿದ್ದಾರೆ.

