HomeLatest NewsSHOCKING : ಅಶ್ಲೀಲ ವಿಡಿಯೋಗಳ ವ್ಯಸನ ; 9 ತಿಂಗಳ ಮಗುವಿನ ಮೇಲೆ 12 ವರ್ಷದ...

SHOCKING : ಅಶ್ಲೀಲ ವಿಡಿಯೋಗಳ ವ್ಯಸನ ; 9 ತಿಂಗಳ ಮಗುವಿನ ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ.!

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಕೇವಲ 12 ವರ್ಷದ ಬಾಲಕನೊಬ್ಬ (ಸಂತ್ರಸ್ತೆಯ ಸಂಬಂಧದಲ್ಲಿ ಮಾವನಾಗುವವನು) ಅಶ್ಲೀಲ ವಿಡಿಯೋಗಳ ಪ್ರಭಾವಕ್ಕೆ ಒಳಗಾಗಿ, ಮದ್ಯದ ಅಮಲಿನಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದ 9 ತಿಂಗಳ ಹೆಣ್ಣುಮಗುವನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಹೊಲದ ಶೆಡ್‌ನಲ್ಲಿ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. check hedline ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ರಾತ್ರಿ ಮಗು ತನ್ನ ತಾಯಿಯ ಪಕ್ಕದಲ್ಲಿ ಮಲಗಿತ್ತು. ಮಧ್ಯರಾತ್ರಿ ಸುಮಾರು 2 ಗಂಟೆಗೆ ತಾಯಿ ಎಚ್ಚರಗೊಂಡಾಗ ಮಗು ಕಾಣಿಸದಿದ್ದರಿಂದ ಕುಟುಂಬಸ್ಥರು ಆತಂಕಗೊಂಡು ಸುತ್ತಮುತ್ತ ಹುಡುಕಾಟ ನಡೆಸಿದರು. ಆದರೆ ರಾತ್ರಿ ಪೂರ್ತಿ ಮಗುವಿನ ಸುಳಿವು ಸಿಗಲಿಲ್ಲ.

ಶನಿವಾರ ಬೆಳಿಗ್ಗೆ ಗ್ರಾಮದ ಕೆಲ ಸ್ಥಳೀಯರು ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದ ಹೊಲದಲ್ಲಿದ್ದ ಶೆಡ್‌ನಲ್ಲಿ ಮಗು ಪ್ರಜ್ಞಾಹೀನವಾಗಿ ಬಿದ್ದಿರುವುದನ್ನು ಗಮನಿಸಿದರು. ಮಗುವಿನ ದೇಹದ ಮೇಲೆ ಗಂಭೀರ ಗಾಯಗಳಿರುವುದನ್ನು ಕಂಡ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದರು. ವೈದ್ಯರು ಮಗುವಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದು, ಪ್ರಸ್ತುತ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅನುಮಾನದ ಮೇರೆಗೆ ಮಗುವಿನ ಸಂಬಂಧಿಕನಾದ 12 ವರ್ಷದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ತಾನು ಮದ್ಯದ ಅಮಲಿನಲ್ಲಿ ಹಾಗೂ ಅಶ್ಲೀಲ ವಿಷಯಗಳನ್ನು ವೀಕ್ಷಿಸಿದ ಪರಿಣಾಮ ಈ ಕೃತ್ಯ ಎಸಗಿರುವುದಾಗಿ ಬಾಲಕ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋರಖ್‌ಪುರ ನಗರ ಪೊಲೀಸ್ ವರಿಷ್ಠಾಧಿಕಾರಿ ಈ ಘಟನೆಯನ್ನು ದೃಢಪಡಿಸಿದ್ದು, ಆರೋಪಿಯ ವಿರುದ್ಧ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular