HomeEntertainmentನಟಿ ಚೈತ್ರಾ ಆಚಾರ್ ಗೆ ಅಸಭ್ಯ ಕಮೆಂಟ್: ಪೊಲೀಸ್ ಅಧಿಕಾರಿಯಿಂದಲೇ ಕೃತ್ಯ!

ನಟಿ ಚೈತ್ರಾ ಆಚಾರ್ ಗೆ ಅಸಭ್ಯ ಕಮೆಂಟ್: ಪೊಲೀಸ್ ಅಧಿಕಾರಿಯಿಂದಲೇ ಕೃತ್ಯ!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಟಿಯರು, ಯುವತಿಯರಿಗೆ ಕೆಟ್ಟ ಕಮೆಂಟ್ ಗಳನ್ನು ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡು ಬುದ್ಧಿ ಹೇಳಬೇಕಾದ ಪೊಲಿಸ್ ಅಧಿಕಾರಿಯೇ ದಾರಿ ತಪ್ಪಿ, ಖ್ಯಾತ ನಟಿಯೊಬ್ಬರಿಗೆ ಅಸಭ್ಯ ಕಮೆಂಟ್ ಗಳನ್ನು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಖ್ಯಾತ ನಟಿ ಚೈತ್ರಾ ಆಚಾರ್ ಅವರ ಇನ್ ಸ್ಟಾ ಗ್ರಾಂ ಪೋಸ್ಟ್ ಗಳಿಗೆ ಪೊಲೀಸ್ ಅಧಿಕಾರಿಯೊಬ್ಬರು ಅಶ್ಲೀಲವಾಗಿ ಕಮೆಂಟ್ ಮಾಡಿ ಕಿರುಕುಳ ನೀಡಿದ್ದು, ಈ ಬಗ್ಗೆ ಚೈತ್ರಾ ಆಚಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ನಟಿ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಹಂಚಿಕೊಂಡಿದ್ದಾರೆ.

ಚೈತ್ರಾ ಆಚಾರ್ ಅವರ ಬೋಲ್ಡ್ ಲುಕ್‌ನ ಕೆಲ ಫೋಟೋಗಳಿಗೆ ಮಹೇಶ್ ಹೊಸಮನಿ ಎಂಬ ಪೊಲೀಸ್ ಅಸಭ್ಯ ಕಮೆಂಟ್ ಮಾಡಿದ್ದಾಗಿ ತಿಳಿಸಿದದರೆ. ಮಹೇಶ್ ಹೊಸಮನಿ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಸಭ್ಯ ಕಾಮೆಂಟ್ ಗಳು ಬಂದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ಕೆಟ್ಟ ಪದಗಳನ್ನು ಬಳಸಿ ತನಗೆ ಕಮೆಂಟ್ ಮಾಡಿದ್ದಾರೆ. ಅಲ್ಲದೇ ಆ ವ್ಯಕ್ತಿಯ ಮೆಸೇಜ್‌ಗಳನ್ನು ಸ್ಕ್ರೀನ್‌ಶಾಟ್ ತೆಗೆದು ಬೆಂಗಳೂರು ಸಿಟಿ ಪೊಲೀಸ್ ಅವರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹೇಶ್ ಹೊಸಮನಿ, ನಟಿಗೆ ಕ್ಷಮೆಯಾಚಿದ್ದಾರೆ. ಸಾರಿ ಮೇಡಂ, ತಪ್ಪಾಗಿದೆ. ನಿಮ್ಮ ಮೇಲಿನ ಕಾಳಜಿಯಿಂದಲೇ ಮೆಸೇಜ್ ಹಾಕಿದ್ದೆ. ದಯವಿಟ್ಟು ಪೋಸ್ಟ್ ತೆಗೆದುಹಾಕಿ. ಇದು ನನ್ನ ಕರಿಯರ್‌ಗೆ ಸಮಸ್ಯೆಯಾಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ. ಈ ಸ್ಕ್ರೀನ್‌ಶಾಟ್‌ನನ್ನೂ ಕೂಡ ನಟಿ ಚೈತ್ರಾ ಆಚಾರ್ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular