HomeEntertainment49ನೇ ವಸಂತಕ್ಕೆ ಕಾಲಿಟ್ಟ ನಟಿ ಶಿಲ್ಪಾ ಶೆಟ್ಟಿ

49ನೇ ವಸಂತಕ್ಕೆ ಕಾಲಿಟ್ಟ ನಟಿ ಶಿಲ್ಪಾ ಶೆಟ್ಟಿ

 

ಖ್ಯಾತ ಬಹುಭಾಷಾ ನಟಿ ಶಿಲ್ಪ ಶೆಟ್ಟಿ ಇಂದು ತಮ್ಮ 49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

1993ರಲ್ಲಿ ತೆರೆಕಂಡ ಶಾರುಖ್ ಖಾನ್ ನಟನೆಯ ಬಾಜಿಗರ್ ಚಿತ್ರದಲ್ಲಿ ಸೀಮಾ ಚೋಪ್ರಾ ಪಾತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರಿಗೆ  ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಎಂಬ ಫಿಲಂ ಫೇರ್ ಪ್ರಶಸ್ತಿಯು ದೊರೆಯಿತು. 1994 ರಂದು ‘ಮೈನ್ ಖಿಲಾಡಿ ತು ಅನಾರಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮಿಳಿನ  ‘ಮಿಸ್ಟರ್ ರೋಮಿಯೋ’ ಮೂಲಕ  ದಕ್ಷಿಣ ಭಾರತಕ್ಕೆ ಕಾಲಿಟ್ಟ ಶಿಲ್ಪಾ ಶೆಟ್ಟಿ ಕನ್ನಡದಲ್ಲಿ ‘ಪ್ರೀತ್ಸೋದ್ ತಪ್ಪಾ’ ‘ಒಂದಾಗೋಣ ಬಾ’, ‘ಆಟೋ ಶಂಕರ್’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು. ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಶಿಲ್ಪಾ ಶೆಟ್ಟಿ ಸುಮಾರು ವರ್ಷಗಳ ಬಳಿಕ ಇದೀಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಕೇಡಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್ ಗೆ ರಿ ಎಂಟ್ರಿ ಕೊಟ್ಟಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಿನಿ ತಾರೆಯರು ಶಿಲ್ಪ ಶೆಟ್ಟಿ ಅವರಿಗೆ ವಿಶ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular