ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆಗಿನ ಮದುವೆಯ ಬಳಿಕ ಹಂಚಿಕೊಂಡಿರುವ “ಈಗ ನಾವು ಮೂವರು” ಎಂಬ ಹೇಳಿಕೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮದುವೆಯಾದ ಕೇವಲ ಒಂದು ತಿಂಗಳಲ್ಲೇ ರಶ್ಮಿಕಾ ತಾಯಿ ಆಗುತ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದ್ದು, ಈ ವೈರಲ್ ಪೋಸ್ಟ್ನ ಹಿಂದಿನ ಅಸಲಿ ಕಾರಣವೇ ಬೇರೆ ಎಂಬ ಮಾಹಿತಿ ಹೊರಬಿದ್ದಿದೆ.
ಹೌದು. ದಕ್ಷಿಣ ಭಾರತದ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ವಿವಾಹವಾಗಿದ್ದು, ಈಗ ರಶ್ಮಿಕಾ ಹಂಚಿಕೊಂಡಿರುವ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದೆ. ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು “ಈಗ ನಾವು ಮೂವರು” (Now it’s us three) ಎಂದು ಬರೆದುಕೊಂಡಿದ್ದಾರೆ. ಫೆಬ್ರವರಿ 26 ರಂದು ಮದುವೆಯಾದ ಈ ಜೋಡಿಯಿಂದ ಇಷ್ಟು ಬೇಗ ಇಂತಹ ಸುಳಿವು ಸಿಕ್ಕಿದ್ದನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಪ್ರೆಗ್ನೆನ್ಸಿ ವದಂತಿ: ರಶ್ಮಿಕಾ ಅವರ ಈ ಹೇಳಿಕೆಯನ್ನು ನೋಡಿದ ಅನೇಕ ನೆಟ್ಟಿಗರು, “ಮದುವೆಯಾದ ಒಂದೇ ತಿಂಗಳಿಗೆ ಗುಡ್ ನ್ಯೂಸ್ ಸಿಕ್ಕಿತಾ?”, “ರಶ್ಮಿಕಾ ತಾಯಿ ಆಗುತ್ತಿದ್ದಾರಾ?” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಸಲಿ ಸತ್ಯವೇನು? : ಆದರೆ ವರದಿಗಳ ಪ್ರಕಾರ, ಇದು ಯಾವುದೇ ವೈಯಕ್ತಿಕ ಜೀವನದ ಗುಡ್ ನ್ಯೂಸ್ ಅಲ್ಲ. ರಶ್ಮಿಕಾ ಮಂದಣ್ಣ ಅವರು ಹೊಸ ಸೋಷಿಯಲ್ ಮೀಡಿಯಾ ಪೇಜ್ ಒಂದನ್ನು ಕ್ರಿಯೇಟ್ ಮಾಡಿದ್ದು, ಅದರಲ್ಲಿ ಈ ಹಿಂದೆ ರಶ್ಮಿಕಾ ಮತ್ತು ಅವರ ಸ್ನೇಹಿತೆ ಮಾತ್ರ ಇದ್ದರು. ಈಗ ವಿಜಯ್ ದೇವರಕೊಂಡ ಕೂಡ ಆ ತಂಡಕ್ಕೆ ಸೇರಿಕೊಂಡಿರುವುದರಿಂದ “ನಾವು ಮೂವರು” ಎಂದು ಫನ್ನಿ ವಿಡಿಯೋ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

