HomeEntertainmentಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ಕೃಷಿ ತಾಪಂಡ

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ಕೃಷಿ ತಾಪಂಡ

ನಟಿ ಕೃಷಿ ತಾಪಂಡ ಇಂದು ತಮ್ಮ 35 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

2016ರಲ್ಲಿ ತೆರೆಕಂಡ ಅನೀಶ್ ತೇಜೇಶ್ವರ್ ನಟನೆಯ ‘ಅಕಿರಾ’ ದಲ್ಲಿ ಅಭಿನಯಿಸುವ ಮೂಲಕ  ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಇವರು  ಅದೇ ವರ್ಷದಲ್ಲಿ ‘ಕಹಿ’ ಚಿತ್ರದಲ್ಲಿ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಬಳಿಕ ‘ಎರಡು ಕನಸು’ ‘ಇರಾ’ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು.

2021 ರಲ್ಲಿ   ರಾಮ್ ಪ್ರಸಾದ್ ನಿರ್ದೇಶನದ ‘ಲಂಕೆ’ ಚಿತ್ರದಲ್ಲಿ ಲೂಸ್ ಮಾದ ಯೋಗಿ ಜೊತೆ ಕೊನೆಯದಾಗಿ ಕಾಣಿಸಿಕೊಂಡಿದ್ದ ಕೃಷಿ ತಾಪಂಡ ಅವರಿಗೆ ಮತ್ಯಾವ ಅವಕಾಶ ದೊರೆಯದೆ ಇರುವ ಕಾರಣ  ಚಿತ್ರರಂಗದಿಂದ ದೂರ ಉಳಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಸಿನಿಮಾ ಕಲಾವಿದರು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular