HomeEntertainment50ನೇ ವಸಂತಕ್ಕೆ ಕಾಲಿಟ್ಟ ನಟಿ ಕಾಜೋಲ್

50ನೇ ವಸಂತಕ್ಕೆ ಕಾಲಿಟ್ಟ ನಟಿ ಕಾಜೋಲ್

ಬಾಲಿವುಡ್ ನ ಖ್ಯಾತ ನಟಿ ಕಾಜೋಲ್ ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

1992ರಲ್ಲಿ ತೆರೆ ಕಂಡ ಆಕ್ಷನ್ ಡ್ರಾಮ ಕಥಾದಾರಿತ ‘ಬೇಖುದಿ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ  ತಮ್ಮ ಸಿನಿ ಜರ್ನಿ ಆರಂಭಿಸಿದ ಕಾಜೋಲ್ 1993 ರಲ್ಲಿ  ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ನಟನೆಯ ಬಾಜಿಗರ್ ನಲ್ಲಿ ಪ್ರಿಯಾ ಚೋಪ್ರಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು. ಬಳಿಕ ‘ಯೇ ದಿಲ್ಲಗಿ’  ‘ಉಧಾರ್ ಕಿ ಜಿಂದಗಿ’ ‘ಕರಣ್ ಅರ್ಜುನ್’ ‘ತಾಕತ್’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು.

ಕಳೆದ ವರ್ಷ ಲಾಸ್ಟ್ ಸ್ಟೋರೀಸ್ 2 ದಲ್ಲಿ ತೆರೆ ಹಂಚಿಕೊಂಡಿದ್ದ ಕಾಜೋಲ್ ಇತ್ತೀಚಿಗೆ ‘ಸರ್ಜಮೀನ್’ ಸೇರಿದಂತೆ ‘ದೋ ಪಟ್ಟಿ’ ‘ಮಾ’ ಸೇರಿದಂತೆ  ಚರಣ್ ತೇಜ್ ಉಪ್ಪಲಪಾಟಿ ನಿರ್ದೇಶನದ ‘ಮಹಾರಾಗ್ನಿ: ಕ್ವೀನ್ ಆಫ್ ಕ್ವೀನ್ಸ್’  ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular