HomeEntertainment47ನೇ ವಸಂತಕ್ಕೆ ಕಾಲಿಟ್ಟ ನಟ ಶ್ರೀನಗರ ಕಿಟ್ಟಿ

47ನೇ ವಸಂತಕ್ಕೆ ಕಾಲಿಟ್ಟ ನಟ ಶ್ರೀನಗರ ಕಿಟ್ಟಿ

ನಟ ಶ್ರೀನಗರ ಕಿಟ್ಟಿ ಇಂದು ತಮ್ಮ 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೇವಲ ನಾಯಕ ನಟನಾಗಿ ಮಾತ್ರವಲ್ಲದೆ ಪೋಷಕ ಪಾತ್ರಗಳಲ್ಲಿ ಹಾಗೂ ಖಳನಾಯಕನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಚಾಪು ಮಾಡಿಸಿದ್ದಾರೆ.

ಶ್ರೀನಗರ ಕಿಟ್ಟಿ ಆರಂಭದಲ್ಲಿ ‘ಮಲೆನಾಡಿನ ಚಿತ್ರಗಳು’ ಹಾಗೂ ‘ದೊಡ್ಡಮನೆ ಹುಡುಗನ ಕಾವ್ಯ’  ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ ಬಾಲ ಕಲಾವಿದನಾಗಿ ಅಭಿನಯಿಸಿದರು. 2003ರಲ್ಲಿ ತೆರೆಕಂಡ ಸೂಪರ್ ಡೂಪರ್ ಹಿಟ್ ‘ಚಂದ್ರ ಚಕೋರಿ’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು 2005 ರಂದು ‘ಗಿರಿ’ ಸಿನಿಮಾದಲ್ಲಿ  ಮೊದಲ ಬಾರಿ ನಾಯಕನಟನಾಗಿ ಕಾಣಿಸಿಕೊಂಡರು. ಬಳಿಕ ಎಲ್ಲಾ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

ನಟ ಶ್ರೀನಗರ ಕಿಟ್ಟಿ ಇತ್ತೀಚಿಗೆ ‘ಬುದ್ಧಿವಂತ 2’ ಸೇರಿದಂತೆ ‘ಸಂಜು ವೆಡ್ಸ್ ಗೀತಾ 2’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಸಿನಿ ತಾರೆಯರು ಶ್ರೀನಗರ ಕಿಟ್ಟಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular