HomeEntertainment52ನೇ ವಸಂತಕ್ಕೆ ಕಾಲಿಟ್ಟ ನಟ ಶರಣ್

52ನೇ ವಸಂತಕ್ಕೆ ಕಾಲಿಟ್ಟ ನಟ ಶರಣ್

ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟ ಶರಣ್ ಇಂದು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟ ಶರಣ್ ಕಾಮಿಡಿ ಕಲಾವಿದನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1996ರಲ್ಲಿ ತೆರೆಕಂಡ ಮಹೇಂದರ್ ನಿರ್ದೇಶನದ ‘ಕರ್ಪೂರದ ಗೊಂಬೆ’ ಎಂಬ ರೋಮ್ಯಾಂಟಿಕ್ ಚಿತ್ರದ ಮೂಲಕ ತಮ್ಮ ಸಿನಿ ಪ್ರಯಣ ಆರಂಭಿಸಿದರು. ನಂತರ ಹಲವಾರು ವರ್ಷ ಕಾಮಿಡಿ ಕಲಾವಿದರಲ್ಲಿ ಮಿಂಚಿದರು.

‘ರಾಂಬೊ’, ‘ಅಧ್ಯಕ್ಷ’, ‘ಬುಲೆಟ್ ಬಸ್ಯಾ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಕಾಮಿಡಿ ರೋಲ್ ಗೆ ಗುಡ್ ಬೈ ಹೇಳಿದರು. ನಟ ಶರಣ್ ಇತ್ತೀಚೆಗೆ ‘ಕರ್ವ್ವ ನವನೀತ್’, ‘ಚೂಮಂತರ್’ ಸೇರಿದಂತೆ ‘ಅವತಾರ ಪುರುಷ ಭಾಗ – 2’ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇಂದು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಲವಾರು ಸಿನಿ ತಾರೆಯರು ನಟ ಶರಣ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular