HomeEntertainmentನಟ ರವಿತೇಜಾ ಅವರ 75ನೇ ಚಿತ್ರದ ಶೂಟಿಂಗ್ ಇಂದಿನಿಂದ ಶುರು

ನಟ ರವಿತೇಜಾ ಅವರ 75ನೇ ಚಿತ್ರದ ಶೂಟಿಂಗ್ ಇಂದಿನಿಂದ ಶುರು

 

ಟಾಲಿವುಡ್ ನಲ್ಲಿ ಮಾಸ್ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ರವಿ ತೇಜ ಅವರ 75ನೇ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇಂದು ಬೆಳಿಗ್ಗೆ 07:29 ಕ್ಕೆ ಇದರ ಮಹೂರ್ತ ನೆರವೇರಿಸಲಾಗಿದೆ. ಭಾನು ಬೋಗವರಪು ನಿರ್ದೇಶಿಸಿರುವ ಈ ಸಿನಿಮಾ ಟೈಟಲ್ ಇನ್ನು ಅನಾವರಣಗೊಳ್ಳಬೇಕಾಗಿದ್ದು, ರವಿತೇಜಾ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ.

ಸೂರ್ಯದೇವ ನಾಗವಂಶಿ ಮತ್ತು ಸಾಯಿ ಸೌಜನ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ರವಿ ತೇಜ ಅವರಿಗೆ ಜೋಡಿಯಾಗಿ ಶ್ರೀ ಲೀಲಾ ಅಭಿನಯಿಸುತ್ತಿದ್ದಾರೆ. ಭೀಮ್ ಸಿಸಿರೋಲಿಯೋ ಸಂಗೀತ ಸಂಯೋಜನೆ ನೀಡಿದ್ದು, ನವೀನ್ ನೂಲಿ ಸಂಕಲನ, ನಂದು ಸಂಭಾಷಣೆ ಹಾಗೂ ವಿಧು ಅಯ್ಯನ ಅವರ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular