HomeIndiaನಟ ಮಿಥುನ್ ಚಕ್ರವರ್ತಿ ಹೆಲ್ತ್ ಅಪ್ ಡೇಟ್ ಬಿಡುಗಡೆ : 'ಅವರು 100% ಆರೋಗ್ಯವಾಗಿದ್ದಾರೆ'

ನಟ ಮಿಥುನ್ ಚಕ್ರವರ್ತಿ ಹೆಲ್ತ್ ಅಪ್ ಡೇಟ್ ಬಿಡುಗಡೆ : ‘ಅವರು 100% ಆರೋಗ್ಯವಾಗಿದ್ದಾರೆ’

ಕೋಲ್ಕತ್ತಾ : ಮಿಥುನ್ ಚಕ್ರವರ್ತಿ ಅವರನ್ನು ಇಂದು ಬೆಳಿಗ್ಗೆ ಕೋಲ್ಕತ್ತಾದ ಅಪೋಲೋ ಆಸ್ಪತ್ರೆಯ ತುರ್ತು ಘಟಕಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಅಸ್ಪತ್ರೆ ಅವರ ಆರೋಗ್ಯದ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದೆ.

ಮಿಥುನ್ ಅವರ ಹಿರಿಯ ಮಗ ಮಿಮೋಹ್ ಈ ಬಗ್ಗೆ ಮಾಹಿತಿ ನೀಡಿದ್ದು, ಮಿಥುನ್‌ ಚಕ್ರವರ್ತಿ ಅವರು 100% ಆರೋಗ್ಯವಾಗಿದ್ದಾರೆ ಮತ್ತು ಇದು ವಾಡಿಕೆಯ ತಪಾಸಣೆಯಾಗಿದೆ” ಎಂದು ಹೇಳಿದರು.

ವರದಿಯ ಪ್ರಕಾರ, ನಟ ಇಂದು ಮುಂಜಾನೆ ಎಂಆರ್ಐಗೆ ಒಳಗಾಗಿದ್ದರು ಮತ್ತು ಇತರ ವೈದ್ಯಕೀಯ ಪರೀಕ್ಷೆಗಳನ್ನು ಸಹ ನಡೆಸಲಾಗಿದೆ. ಎಂಆರ್ಐ ವರದಿಗಾಗಿ ಕಾಯಲಾಗುತ್ತಿದೆ. ಅವರು ಪ್ರಸ್ತುತ ನ್ಯೂರೋ-ಮೆಡಿಸಿನ್ ತಜ್ಞರ ಮೇಲ್ವಿಚಾರಣೆಯಲ್ಲಿದ್ದಾರೆ. ಬೆಳಿಗ್ಗೆ 10: 30 ರ ಸುಮಾರಿಗೆ ಆಸ್ಪತ್ರೆಗೆ ಕರೆತರಲಾಯಿತು. ಸದ್ಯ ಅವರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular