HomeKarnatakaನಟ ದುನಿಯಾ ವಿಜಯ್ ಮಾನವೀಯ ಕಾರ್ಯ: ಜೈಲಲ್ಲಿದ್ದ ಆರು ಮಂದಿಯ ದಂಡ ಪಾವತಿಸಿ ಬಂಧಮುಕ್ತ

ನಟ ದುನಿಯಾ ವಿಜಯ್ ಮಾನವೀಯ ಕಾರ್ಯ: ಜೈಲಲ್ಲಿದ್ದ ಆರು ಮಂದಿಯ ದಂಡ ಪಾವತಿಸಿ ಬಂಧಮುಕ್ತ

ಬೆಂಗಳೂರು: ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ನಟ ದುನಿಯಾ ವಿಜಯ್ ಅವರು ದಂಡ ಪಾವತಿಸಲಾಗದೆ ಸೆರೆವಾಸ ಅನುಭವಿಸುತ್ತಿದ್ದ ಆರು ಕೈದಿಗಳ ದಂಡದ ಮೊತ್ತವನ್ನು ಪಾವತಿಸಿ ಅವರನ್ನು ಬಂಧಮುಕ್ತಗೊಳಿಸಿದ್ದಾರೆ.

ಇತ್ತೀಚೆಗೆ ತಮ್ಮ ಸ್ವಂತ ಊರಾದ ಕುಂಬಾರಹಳ್ಳಿಗೆ ಭೇಟಿ ನೀಡಿದ್ದ ಅವರಿಗೆ ತಮ್ಮ ಊರಿನ ಮಹಿಳೆ ಸೇರಿ ಆರು ಮಂದಿ ಕೈದಿಗಳು ದಂಡ ಪಾವತಿಸಲಾಗದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಗೊತ್ತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರು ಮಂದಿಗೆ ಕೋರ್ಟ್ ವಿಧಿಸಿರುವ ದಂಡ ಪಾವತಿಸಿ ಅವರ ಬಿಡುಗಡೆಗೆ ದುನಿಯಾ ವಿಜಯ್ ಸಹಕರಿಸಿದ್ದು, ಆರು ಮಂದಿ ಕೈದಿಗಳು ಬಂಧಮುಕ್ತರಾಗಿದ್ದಾರೆ. ವಿಜಯ್ ಅವರ ಸಹಾಯಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಿ ಎಂದು ಬಿಡುಗಡೆಯಾದವರಿಗೆ ದುನಿಯಾ ವಿಜಯ್ ಹಾರೈಸಿದ್ದಾರೆ. ಈ ಹಿಂದೆ ಅವರು ಮೈಸೂರಿನ ಕಾರಾಗೃಹದಲ್ಲಿದ್ದ ಕೈದಿಗಳಿಗೆ ದಂಡ ಪಾವತಿಸಿ ಬಿಡುಗಡೆಗೆ ಸಹಾಯ ಮಾಡಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular