HomeKarnatakaನಟ ಚೇತನ್ ಚಂದ್ರ ಮೇಲೆ 20 ಜನರಿದ್ದ ತಂಡದಿಂದ ಅಟ್ಯಾಕ್

ನಟ ಚೇತನ್ ಚಂದ್ರ ಮೇಲೆ 20 ಜನರಿದ್ದ ತಂಡದಿಂದ ಅಟ್ಯಾಕ್

ಕನ್ನಡದ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಚೇತನ್ ಚಂದ್ರ ಅವರ ಮೇಲೆ 20 ಜನರಿದ್ದ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಬೆಂಗಳೂರಿನ ಕಗ್ಗಲಿಪುರದಲ್ಲಿ ಭಾನುವಾರದಂದು ಈ ಘಟನೆ ನಡೆದಿದೆ.

ವಿಶ್ವ ತಾಯಂದಿರ ದಿನದಂದು ನಟ ಚೇತನ್ ಚಂದ್ರ, ತಮ್ಮ ತಾಯಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಾಪಸ್ ಬರುವಾಗ ಅವರ ಕಾರನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಕಾರಿಗೂ ಸಹ ಹಾನಿ ಮಾಡಲಾಗಿದೆ.

ಕಿಡಿಗೇಡಿಗಳ ಹಲ್ಲೆಯಿಂದ ಚೇತನ್ ಚಂದ್ರ ಅವರ ಮೂಗು ಸೇರಿದಂತೆ ಹಲವೆಡೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಅವರು ಬಳಿಕ ತಮ್ಮ ಮೇಲೆ ನಡೆದ ಹಲ್ಲೆ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular