HomeKarnatakaBREAKING: ಇನೋವಾ ಡಿಕ್ಕಿಯಾಗಿ ವಕೀಲ ಸಾವು: ಎರಡೂವರೆ ಕಿ.ಮೀ ಸವಾರನ ಎಳೆದೊಯ್ದ ಚಾಲಕ: ವ್ಯವಸ್ಥಿತ ಕೊಲೆ...

BREAKING: ಇನೋವಾ ಡಿಕ್ಕಿಯಾಗಿ ವಕೀಲ ಸಾವು: ಎರಡೂವರೆ ಕಿ.ಮೀ ಸವಾರನ ಎಳೆದೊಯ್ದ ಚಾಲಕ: ವ್ಯವಸ್ಥಿತ ಕೊಲೆ ಶಂಕೆ

ವಿಜಯಪುರ: ಇನೋವಾ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ವಕೀಲ ಸಾವು ಕಂಡ ಘಟನೆ ವಿಜಯಪುರದ ಬಸವನನಗರದ ಬಳಿ ನಡೆದಿದೆ.

ಎರಡೂವರೆ ಕಿಲೋಮೀಟರ್ ಸವಾರನನ್ನು ವಾಹನ ಚಾಲಕ ಬಸವನಗರದಿಂದ ಜಿಲ್ಲಾ ಪಂಚಾಯಿತಿ ಪ್ರವೇಶ ದ್ವಾರದವರೆಗೆ ಕಾರ್ ಚಾಲಕ ಎಳೆದುಕೊಂಡು ಹೋಗಿದ್ದಾನೆ. ದ್ವಿಚಕ್ರ ವಾಹನದಲ್ಲಿದ್ದ ವಕೀಲ ರವಿ ಮೇಲಿನಮನಿ(37) ಸಾವನ್ನಪ್ಪಿದ್ದಾರೆ.

ಅವರು ಭೀಮಾ ತೀರದ ಹಂತಕ ಕುಖ್ಯಾತಿಯ ಭಾಗಪ್ಪನ ಸಂಬಂಧಿಕನಾಗಿದ್ದಾರೆ. ಘಟನೆಯ ಬಳಿಕ ಇನೋವಾ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಇದು ಅಪಘಾತವಲ್ಲ, ವ್ಯವಸ್ಥಿತವಾಗಿ ರವಿ ಮೇಲಿನಮನಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಎಸ್‌ಪಿ ಋಷಿಕೇಶ ಸೋನೆವಣೆ, ಎಸ್ಪಿ ಶಂಕರ ಮಾರಿಹಾಳ ಡಿವೈಎಸ್ಪಿ ಬಸವರಾಜ ಯಲಿಗಾರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ಬಳಿಕ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಎಸ್.ಪಿ. ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular