HomeAgriculture'ಸಿರಿಧಾನ್ಯ' ಗಳ ಮಹತ್ವ ಕುರಿತು ಪ್ರಧಾನಿ ಮೋದಿ ಬರೆದ ಹಾಡು ರಿಲೀಸ್

‘ಸಿರಿಧಾನ್ಯ’ ಗಳ ಮಹತ್ವ ಕುರಿತು ಪ್ರಧಾನಿ ಮೋದಿ ಬರೆದ ಹಾಡು ರಿಲೀಸ್

ಪ್ರಸ್ತುತ, ಸಿರಿಧಾನ್ಯಗಳಿಂದ ಆಗುವ ಆರೋಗ್ಯ ಲಾಭ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ಇದರ ಜೊತೆಗೆ ಸಿರಿಧಾನ್ಯಗಳ ಬಳಕೆಯೂ ಹೆಚ್ಚಾಗಿದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸಿರಿಧಾನ್ಯಗಳ ಮಹತ್ವ ಸಾರುವ ಕುರಿತು ಹಾಡನ್ನು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಬರೆದಿರುವ ಹಾಡನ್ನು ಗ್ರಾಮಿ ಪ್ರಶಸ್ತಿ ವಿಜೇತ ಮುಂಬೈ ಮೂಲದ ಗಾಯಕಿ ಫಲ್ಗುಣಿ ಶಾ ಅವರ ಬ್ಯಾಂಡ್ ‘ಅಬುಂಡೆನ್ಸ್ ಇನ್ ಮಿಲ್ಲೆಟ್ಸ್’ ಹೆಸರಿನಲ್ಲಿ ಶುಕ್ರವಾರದಂದು ಬಿಡುಗಡೆ ಮಾಡಲಾಗಿದೆ.

ಇಂಗ್ಲೀಷ್ ಹಾಗೂ ಹಿಂದಿಯಲ್ಲಿರುವ ಈ ಹಾಡುಗಳು ಸಿರಿಧಾನ್ಯಗಳ ಶಕ್ತಿಯ ಮಹತ್ವ ಸಾರುತ್ತಿದ್ದು, ಇದನ್ನು ನನ್ನ ಹಾಗೂ ನನ್ನ ಪತಿ ಗೌರವ್ ಶಾ ಅವರ ಜೊತೆಗೂಡಿ ಪ್ರಧಾನಿ ನರೇಂದ್ರ ಮೋದಿಯವರು ಬರೆದಿದ್ದಾರೆ ಎಂದು ಫಲ್ಗುಣಿ ಶಾ ಹೇಳಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular