HomeLatest News‘ಗಜನಿ’ ನಾಯಕನಾಗಲು ಆಮಿರ್ ಖಾನ್ ಒಪ್ಪಿದ್ದು ಹೇಗೆ: ಬ್ಲಾಕ್‌ಬಸ್ಟರ್ ಹಿಂದಿತ್ತು ಪ್ರದೀಪ್ ರಾವತ್ ಬಾಂಧವ್ಯ!

‘ಗಜನಿ’ ನಾಯಕನಾಗಲು ಆಮಿರ್ ಖಾನ್ ಒಪ್ಪಿದ್ದು ಹೇಗೆ: ಬ್ಲಾಕ್‌ಬಸ್ಟರ್ ಹಿಂದಿತ್ತು ಪ್ರದೀಪ್ ರಾವತ್ ಬಾಂಧವ್ಯ!

ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಆ್ಯಕ್ಷನ್ ಸಿನಿಮಾಗಳಲ್ಲಿ ಒಂದಾದ ‘ಗಜನಿ’ ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿದ ಇತಿಹಾಸ ಸಣ್ಣದದಲ್ಲ. ಆದರೆ ಈ ಬ್ಲಾಕ್‌ಬಸ್ಟರ್ ಸಿನಿಮಾದಲ್ಲಿ ಆಮಿರ್ ಖಾನ್ ನಟಿಸಲು ಮುಖ್ಯ ಕಾರಣರಾಗಿದ್ದು ನಟ ಪ್ರದೀಪ್ ರಾವತ್ ಎಂಬ ಕುತೂಹಲಕಾರಿ ವಿಷಯ ಬೆಳಕಿಗೆ ಬಂದಿದೆ. ತಮಿಳು ಮತ್ತು ತೆಲುಗು ಭಾಷೆಯ ಗಜನಿ ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದ ಪ್ರದೀಪ್ ರಾವತ್, ಆಮಿರ್ ಖಾನ್ ಅವರನ್ನು ಒಪ್ಪಿಸಿ ಹಿಂದಿ ಆವೃತ್ತಿಗೆ ಕರೆತಂದಿದ್ದರು.

ಹಳೆಯ ಸಂದರ್ಶನವೊಂದರಲ್ಲಿ ಈ ವಿಷಯ ಹಂಚಿಕೊಂಡಿದ್ದ ಪ್ರದೀಪ್ ರಾವತ್, ನಿರ್ದೇಶಕ ಎಆರ್ ಮುರುಗಡೋಸ್ ಮೊದಲು ಸಲ್ಮಾನ್ ಖಾನ್ ಅವರನ್ನು ನಾಯಕನನ್ನಾಗಿ ಮಾಡಲು ಬಯಸಿದ್ದರು. ಆದರೆ ಸಲ್ಮಾನ್ ಅವರ ಕೋಪದ ಸ್ವಭಾವಕ್ಕಿಂತ ಶಾಂತ ಸ್ವರೂಪದ ಆಮಿರ್ ಖಾನ್ ಈ ಪಾತ್ರಕ್ಕೆ ಮತ್ತು ನಿರ್ದೇಶಕರಿಗೆ ಸೂಕ್ತ ಎಂದು ಭಾವಿಸಿ ತಾವೇ ಆಮಿರ್ ಅವರನ್ನು ಸಂಪರ್ಕಿಸಿದ್ದಾಗಿ ಹೇಳಿದ್ದರು. ಆಮಿರ್ ಆರಂಭದಲ್ಲಿ ಹಿಂದೇಟು ಹಾಕಿದರೂ ಪ್ರದೀಪ್ ಅವರೊಂದಿಗಿನ ೨೫ ವರ್ಷಗಳ ಸುದೀರ್ಘ ಸ್ನೇಹದ ಕಾರಣದಿಂದ ‘ನೋ’ ಎನ್ನಲಾಗದೆ ಈ ಚಿತ್ರಕ್ಕೆ ಒಪ್ಪಿಗೆ ನೀಡಿದ್ದರು.

ಹೀಗೆ ಪ್ರದೀಪ್ ರಾವತ್ ಒತ್ತಾಯಕ್ಕೆ ಒಪ್ಪಿ ಮಾಡಿದ ಗಜನಿ ಸಿನಿಮಾ ೨೦೦೮ರಲ್ಲಿ ಬಿಡುಗಡೆಯಾಗಿ, ಭಾರತೀಯ ಚಿತ್ರರಂಗದಲ್ಲಿ ಮೊದಲ ಬಾರಿಗೆ ೧೦೦ ಕೋಟಿ ರೂಪಾಯಿ ಗಳಿಕೆ ಕಂಡ ಸಿನಿಮಾ ಎಂಬ ಹೊಸ ಇತಿಹಾಸ ಬರೆಯಿತು. ಆದರೆ ಗಜನಿ ಖಳನಟ ಪ್ರದೀಪ್ ರಾವತ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಮುಂಬೈನಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ‘ಸರ್ಫರೋಷ್’, ‘ಲಗಾನ್’ ಸೇರಿದಂತೆ ಹಲವು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸಿದ್ದ ಅವರ ಅಗಲಿಕೆಗೆ ಚಿತ್ರರಂಗ ಕಂಬನಿ ಮಿಡಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular