
ಕಳೆದ ಭಾನುವಾರ ಕಾರಹುಣ್ಣಿಮೆಯಂದು ಬೈಕ್ ನಲ್ಲಿ ಹೋಗುವಾಗ ಗದಗದಲ್ಲಿ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಯುವಕನ ಕತ್ತು ಸೀಳಿತ್ತು. ಬಳಿಕ ಕೂಡಲೇ ಯುವಕನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ 5 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ.
ಮೃತ ಯುವಕ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ನಿವಾಸಿ ಪಿ.ರವಿಯಾಗಿದ್ದು, ಕಳೆದ ಭಾನುವಾರ ಬೈಕ್ ನಲ್ಲಿ ಹೋಗುವಾಗ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಕತ್ತು ಸೀಳಿದ ಪರಿಣಾಮ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

