HomeLatest Newsಪುರುಷರು ಮಾಡುವ ಈ ಕೆಲಸದಿಂದ ಘಾಸಿಗೊಳ್ಳುತ್ತೆ ಮಹಿಳೆ ಮನಸ್ಸು

ಪುರುಷರು ಮಾಡುವ ಈ ಕೆಲಸದಿಂದ ಘಾಸಿಗೊಳ್ಳುತ್ತೆ ಮಹಿಳೆ ಮನಸ್ಸು

ಸಂಬಂಧ ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ. ಪ್ರೀತಿಸಿದ ವ್ಯಕ್ತಿಗಾಗಿ ಕೆಲವರು ಏನು ಬೇಕಾದ್ರೂ ಮಾಡಲು ಸಿದ್ಧವಿರುತ್ತಾರೆ. ಆದ್ರೆ ಸಂಗಾತಿಯ ಮನಸ್ಸು ಗೆಲ್ಲಬೇಕೆಂಬ ಆತುರದಲ್ಲಿ ಪುರುಷರು ಕೆಲವೊಂದು ಯಡವಟ್ಟು ಮಾಡಿಕೊಳ್ತಾರೆ. ಇದು ಮಹಿಳೆಯರ ಮನಸ್ಸನ್ನು ಘಾಸಿಗೊಳಿಸುತ್ತದೆ.

ಆರಂಭದಲ್ಲಿ ತನ್ನಿಷ್ಟದ ಹುಡುಗಿಯನ್ನು ಸೆಳೆಯಲು ಪುರುಷರು ಅನೇಕ ಸುಳ್ಳುಗಳನ್ನು ಹೇಳ್ತಾರೆ. ಸುಳ್ಳು ಯಾವಾಗ್ಲೂ ಸುಳ್ಳೆ. ಸಂಗಾತಿ ಸುಳ್ಳು ಗೊತ್ತಾದಾಗ ಮಹಿಳೆಗೆ ನೋವಾಗುತ್ತದೆ. ನಂತ್ರ ಸಂಗಾತಿ ಹೇಳುವ ಯಾವುದೇ ವಿಷ್ಯವನ್ನು ನಂಬಲು ಮಹಿಳೆ ಸಿದ್ಧವಿರುವುದಿಲ್ಲ. ಹಾಗಾಗಿ ಎಂದೂ ಮಹಿಳಾ ಸಂಗಾತಿ ಮುಂದೆ ಸುಳ್ಳು ಹೇಳಬೇಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫಿಟ್ ಆಗಿರುವ ಹುಡುಗ, ಹುಡುಗಿಯರಿಗೆ ಇಷ್ಟವಾಗ್ತಾನೆ ನಿಜ. ಹಾಗಂತ ಹುಡುಗಿ ಮುಂದೆ ಸದಾ ನಿಮ್ಮ ಬಾಡಿ ಬಗ್ಗೆ ಮಾತನಾಡಬೇಕೆಂದೇನೂ ಇಲ್ಲ. ಆಕೆಗೆ ನೋಡಿ ತಿಳಿದುಕೊಳ್ಳುವ ಸಾಮರ್ಥ್ಯವಿರುತ್ತದೆ. ಹುಡುಗಿ ಮುಂದೆ ನಿಮ್ಮ ಮನಸ್ಸಿನ ಮಾತುಗಳನ್ನಾಡಿ. ನಿಮ್ಮ ಮನಸ್ಸಿನ ಭಾವನೆಗಳನ್ನು ಆಕೆ ಮುಂದಿಟ್ಟರೆ ಮಾತ್ರ ಹುಡುಗಿ ಹೃದಯದಲ್ಲಿ ಜಾಗ ಪಡೆಯಲು ಸಾಧ್ಯ.

ಹುಡುಗಿಯರಿಗೆ ಸಾಮಾನ್ಯವಾಗಿ ಒರಟಾದ ಯುವಕರು ಇಷ್ಟವಾಗ್ತಾರೆ. ಸದಾ ಅಲಂಕಾರ ಮಾಡಿಕೊಂಡು ಸಣ್ಣ ಸಣ್ಣ ವಿಷ್ಯಕ್ಕೂ ಅತೀ ಕಾಳಜಿ ತೋರುವ ಹುಡುಗರು ಇಷ್ಟವಾಗುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular