ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ: ಅಂಗಾಂಗ ದಾನದ ಮೂಲಕ ಅನೇಕರಿಗೆ ಜೀವ ದಾನ

ದಾವಣಗೆರೆ: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ತೆಗ್ಗಿನಹಳ್ಳಿ ಗ್ರಾಮದ ನಿವಾಸಿ ದಿವಂಗತ ಬೀರಪ್ಪ ಅವರ ಪತ್ನಿ ಗಾಯತ್ರಮ್ಮ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೆಪ್ಟೆಂಬರ್ 12 ರಂದು ಗಾಯತ್ರಮ್ಮ ಮೃತರಾದರು. ಮೃತರ ಚಲನೆ ಇರುವ ದೇಹದ ಉಳಿದ ಭಾಗದ ಅಂಗಾಂಗಳಾದ ಹೃದಯ, ಕಿಡ್ನಿ, ಲಿವರ್, ಶ್ವಾಸಕೋಶ ಮತ್ತು ಎರಡು ಕಣ್ಣಿನ ಪೊರೆಯನ್ನು ಬೆಂಗಳೂರು ಹೆಚ್ಎಎಲ್ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ತಾಯಿಯ ನೆನಪಿಗಾಗಿ ಬೇರೆಯವರ ಜೀವ ಉಳಿಸಲು ಅಂಗಾಂಗ ದಾನ ಮಾಡಲು ಅವರ ಮಕ್ಕಳಾದ ಸಂತೋಷ, ಸಂಗೀತ, ಚೈತ್ರಾ, ಪ್ರಶಾಂತ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಂಗಾಂಗ ದಾನವು ನಿಯಮಾವಳಿ ರೀತ್ಯಾ ನಡೆಯಲಿದೆ. ಇದೇ ರೀತಿ ಮೃತರಾದವರ ಅಂಗಾಂಗ ದಾನ ಮಾಡುವ ಮೂಲಕ ಜೀವ ಉಳಿಸಲು ಮುಂದಾಗಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read