HomeLatest Newsಸಿಂಪಲ್ ಸುನಿ ಚಿತ್ರದ ಶೂಟಿಂಗ್ ವೇಳೆ ತಪ್ಪಿದ ದುರಂತ: ಹಗ್ಗದಿಂದ ಬಿದ್ದು ನಾಯಕಿಗೆ ಗಾಯ

ಸಿಂಪಲ್ ಸುನಿ ಚಿತ್ರದ ಶೂಟಿಂಗ್ ವೇಳೆ ತಪ್ಪಿದ ದುರಂತ: ಹಗ್ಗದಿಂದ ಬಿದ್ದು ನಾಯಕಿಗೆ ಗಾಯ

ಬೆಂಗಳೂರು: ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಖ್ಯಾತಿಯ ಸಿಂಪಲ್ ಸುನಿ ನಿರ್ದೇಶನದ ಸಿನಿಮಾ ಚಿತ್ರೀಕರಣ ವೇಳೆ ಅದೃಷ್ಟವಶಾತ್ ದುರಂತವೊಂದು ತಪ್ಪಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುವಾಗ ಘಟನೆ ನಡೆದಿದೆ. ರೋಪ್ ಕಟ್ಟಿ ಎಳೆಯುವಾಗ ಹಗ್ಗದ ಮೇಲಿಂದ ಬಿದ್ದು ನಾಯಕಿ ಸಾತ್ವಿಕ ಗಾಯಗೊಂಡಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಪುತ್ರಿಯಾಗಿರುವ ಸಾತ್ವಿಕ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ‘ಮೋಡ ಕವಿದ ವಾತಾವರಣ’ ನಾಯಕ ಶೀಲಮ್ ಜೊತೆಗೆ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಹಗ್ಗದ ಮೇಲೆ ನೇತಾಡುವ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಅದೃಷ್ಟವಶಾತ್ ಸಾತ್ವಿಕ ಅಪಾಯದಿಂದ ಪಾರಾಗಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular