HomeAutoಯಮಹಾ ಮೋಟಾರ್ ನಿಂದ ಬೆಂಗಳೂರಿನಲ್ಲಿ ʼವಿಶೇಷ ಟ್ರ್ಯಾಕ್ ಡೇʼ

ಯಮಹಾ ಮೋಟಾರ್ ನಿಂದ ಬೆಂಗಳೂರಿನಲ್ಲಿ ʼವಿಶೇಷ ಟ್ರ್ಯಾಕ್ ಡೇʼ

ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈವೇಟ್ ಲಿಮಿಟೆಡ್, ತನ್ನ ಗ್ರಾಹಕರಿಗಾಗಿ ಫೆಬ್ರವರಿ 25 ರಂದು ಬೆಂಗಳೂರಿನ ಅರುನಿ ಗ್ರಿಡ್‌ನಲ್ಲಿ ವಿಶೇಷ ಟ್ರ್ಯಾಕ್ ಡೇ ಕಾರ್ಯಕ್ರಮವನ್ನು ಆಯೋಜಿಸಿತ್ತು.

“ದಿ ಕಾಲ್ ಆಫ್ ದಿ ಬ್ಲೂ” ಬ್ರ್ಯಾಂಡ್ ಅಭಿಯಾನದ ಭಾಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ಸುಮಾರು 100ಕ್ಕೂ ಹೆಚ್ಚು ಯಮಹಾ ಮಾಲೀಕರು ಮತ್ತು ಬೆಂಗಳೂರು ಮತ್ತು ಹತ್ತಿರದ ಪ್ರದೇಶಗಳ 300ಕ್ಕೂ ಹೆಚ್ಚು ಯಮಹಾ ಅಭಿಮಾನಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಬೆಂಗಳೂರಿನ ಅರುನಿ ಗ್ರಿಡ್‌ನಲ್ಲಿ ನಡೆದ ಟ್ರ್ಯಾಕ್ ಡೇ ಕಾರ್ಯಕ್ರಮವು ಯಮಹಾ ಬೈಕ್ ಮಾಲೀಕರಿಗೆ ತಮ್ಮ ಯಮಹಾ ಮೋಟಾರ್‌ಸೈಕಲ್‌ಗಳನ್ನು ಟ್ರ್ಯಾಕ್‌ನಲ್ಲಿ ಓಡಿಸುವ ರೋಮಾಂಚಕ್ಕೆ ಅನುಭವಕ್ಕೆ ಪಾತ್ರರಾಗುವ ಅವಕಾಶವನ್ನು ಒದಗಿಸಿತು. ಭಾಗವಹಿಸಿದವರು ತಮ್ಮ ಬೈಕ್ ಗಳನ್ನು ಟ್ರಾಕ್ ನಲ್ಲಿ ಓಡಿಸುತ್ತಾ ಬೈಕ್ ನಲ್ಲಿ ಲಭ್ಯವಿರುವ ತ್ವರಿತ ಶಿಫ್ಟರ್‌ಗಳು ಮತ್ತು ಟ್ರಾಕ್ಷನ್ ಕಂಟ್ರೋಲ್ ಫೀಚರ್ ಗಳನ್ನು ಬಳಸಿ ರೇಸ್ ಅನುಭವವನ್ನು ಪಡೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಮಹಾ ಬೈಕ್‌ಗಳ ಪ್ರದರ್ಶನದ ಜೊತೆಗೆ, ಆಕರ್ಷಕ ವೈಝಡ್ಎಫ್-ಆರ್3 ಮತ್ತು ಎಂಟಿ-03 ಪ್ರದರ್ಶನವನ್ನೂ ಮಾಡಲಾಯಿತು. ಯಮಹಾ ಇಂಡಿಯಾದ ಶ್ರೇಣಿಯ ಈ ಎರಡು ಹೊಸ ಉತ್ಪನ್ನಗಳು ಆಯಾ ವಿಭಾಗಗಳಲ್ಲಿ ಅಪೂರ್ವ ಕಾರ್ಯಕ್ಷಮತೆ ಮತ್ತು ವಿಶೇಷ ಗುಣಮಟ್ಟವನ್ನು ಒದಗಿಸುತ್ತದೆ. ಯಮಹಾ ಅಪ್ಯಾರಲ್ಸ್ & ಆಕ್ಸೆಸರೀಸ್ ಪ್ರದರ್ಶನ, ಫೋಟೋ-ಆಪ್ ಝೋನ್, ಮತ್ತು ಗೇಮಿಂಗ್ ಝೋನ್ ಸೇರಿದಂತೆ ಹಲವಾರು ಇತರ ಚಟುವಟಿಕೆಗಳನ್ನು ಸಹ ಆಯೋಜಿಸಲಾಗಿತ್ತು.

For Latest News Updates, Join Our Whatsapp Community🚩
RELATED ARTICLES

Most Popular