HomeEntertainment'ಸೃಷ್ಟಿ' ಎಂಬ ಕಿರು ಚಿತ್ರ ರಿಲೀಸ್

‘ಸೃಷ್ಟಿ’ ಎಂಬ ಕಿರು ಚಿತ್ರ ರಿಲೀಸ್

ಯೂಟ್ಯೂಬ್ ನಲ್ಲಿ ಇತ್ತೀಚಿಗೆ ಕಿರು ಚಿತ್ರಗಳು ಭರ್ಜರಿ ಸೌಂಡ್ ಮಾಡುತ್ತಿದ್ದು ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಕಥೆಗಳು ವೀಕ್ಷಕರಿಂದ ಮೆಚ್ಚುಗೆ ಗಳಿಸುತ್ತಿವೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಸೃಷ್ಟಿ ಎಂಬ ಶಾರ್ಟ್ ಫಿಲಂ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ಈ ಕಿರು ಚಿತ್ರವನ್ನು ಸುಜಿತ್ ರಚಿಸಿ ನಿರ್ದೇಶಿಸುವುದರ ಜೊತೆಗೆ ಸಂಭಾಷಣೆ ಬರೆದಿದ್ದಾರೆ. ರಘು ಸಮರ್ಥ ಮತ್ತು ಕೃತಿ ಪ್ರಮುಖ ಪಾತ್ರದಲ್ಲಿದ್ದು, ಸೀನಿ ಸ್ಕ್ರೀನ್ ಬ್ಯಾನರ್ ನಡಿ ಲಕ್ಷ್ಮಿ ಸುಚಿತ್ ನಿರ್ಮಾಣ ಮಾಡಿದ್ದಾರೆ. ಜಯಪ್ರಕಾಶ್ ಸಂಕಲನ, ಮತ್ತು ತ್ಯಾಗರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ಅಪ್ಪ – ಮಗಳ ಬಾಂಧವ್ಯದ ಕುರಿತ ಈ ಕಿರು ಚಿತ್ರಕ್ಕೆ ನೋಡುಗರಿಂದ ಮೆಚ್ಚುಗೆಯ  ಸುರಿಮಳೆಯೇ ಹರಿದು ಬಂದಿದ್ದು, ದೊಡ್ಡ ಸಿನಿಮಾ ನೋಡಿದಂತೆ ಅನುಭವವಾಗಿದೆ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular