ತಿರುಪತಿ: ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಒಂದೇ ದಿನ 5.3 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಇದು ಕಳೆದೊಂದು ವರ್ಷದ ದಿನದಲ್ಲಿ ಸಂಗ್ರಹವಾದ ಅತ್ಯಧಿಕ ಮೊತ್ತವಾಗಿದೆ.
ವಿಶ್ವದ ಶ್ರೀಮಂತ ದೇವಾಲಯ ಎಂದೇ ಹೇಳಲಾಗುವ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಸೋಮವಾರ ಒಂದೇ ದಿನ 78,730 ಭಕ್ತರು ಭೇಟಿ ನೀಡಿದ್ದಾರೆ. ಹಬ್ಬ ಮತ್ತು ರಜಾ ದಿನಗಳಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆಗಿಂತ ಇದು ಕಡಿಮೆಯಾಗಿದ್ದರೂ, ಒಂದೇ ದಿನ 5.3 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.
2023ರ ಜನವರಿ 2ರಂದು ತಿರುಮಲದಲ್ಲಿ ಒಂದೇ ದಿನ 7.7 ಕೋಟಿ ರೂ. ಕಾಣಿಕೆ ಸಂಗ್ರಹವಾಗಿ ದಾಖಲೆ ಬರೆದಿತ್ತು. ಹಲವು ಸಲ ತಿರುಪತಿಯಲ್ಲಿ ಒಂದು ದಿನಕ್ಕೆ 6 ಕೋಟಿ ರೂ.ಗಿಂತಲೂ ಅಧಿಕ ಕಾಣಿಕೆ ಬಂದ ನಿದರ್ಶನಗಳಿವೆ.