
ಬೆಂಗಳೂರಿನಲ್ಲೊಬ್ಬ ತೌಸೀಫ್ ಎಂಬ ಸೈಕೋ ಪ್ರತ್ಯಕ್ಷನಾಗಿದ್ದು, ಸೆಕ್ಯುರಿಟಿ ಗಾರ್ಡ್ ಗಳೇ ಈತನ ಟಾರ್ಗೆಟ್ ಆಗಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಗಳನ್ನೇ ಹುಡುಕಿ ಇರಿಯುವ ಸೈಕೋ ಕಿಲ್ಲರ್ ಕೃತ್ಯಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.
ಮಧ್ಯರಾತ್ರಿ ಕೃತ್ಯಕ್ಕೆ ಇಳಿಯುವ ಸೈಕೋ ಕಂಠಪೂರ್ತಿ ಎಣ್ಣೆ ಹೊಡೆದು ಬಲಿಗಾಗಿ ಕಾಯತ್ತಿರುತ್ತಾನೆ. ತೌಸೀಫ್ ಎಂಬ ಈ ಸೈಕೋಪಾತ್ ನಗರದ ಹಲವು ಕಡೆ ಸೆಕ್ಯೂರಿಟಿ ಗಾರ್ಡ್ ಗಳಿಗೆ ಇರಿದಿದ್ದಾನೆ. ಈತನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರ್ ಟಿ ನಗರ ಪೊಲೀಸರು ಈತನನ್ನು ಬಂಧಿಸಿದ್ದಾರೆ.

