HomeInternationalಡ್ರಗ್ಸ್‌ ಚಟಕ್ಕೆ ಬಿದ್ದ ಪೋರ್ನ್‌ ಸ್ಟಾರ್‌ ಮಾಡಿದ್ದಾಳೆ ಇಂಥಾ ಕೆಲಸ....!

ಡ್ರಗ್ಸ್‌ ಚಟಕ್ಕೆ ಬಿದ್ದ ಪೋರ್ನ್‌ ಸ್ಟಾರ್‌ ಮಾಡಿದ್ದಾಳೆ ಇಂಥಾ ಕೆಲಸ….!

ಪೋರ್ನ್ ತಾರೆಯೊಬ್ಬಳು ತನ್ನ ಕೊಕೇನ್ ಚಟಕ್ಕಾಗಿ ಕಳ್ಳತನಕ್ಕಿಳಿದು ಸಿಕ್ಕಿಬಿದ್ದಿದ್ದಾಳೆ. ವಿವಿಧ ಅಂಗಡಿಗಳಿಂದ ಮಾಲುಗಳನ್ನು ಕದ್ದ ಈಕೆ, ಆಭರಣ ಅಂಗಡಿಯಿಂದ ಸುಮಾರು 2.5 ಲಕ್ಷ ಮೌಲ್ಯದ ಉಂಗುರವನ್ನೇ ಎಗರಿಸಿದ್ದಳು. ವಜ್ರದ ಉಂಗುರಕ್ಕೆ ಬದಲಾಗಿ 30 ಪೌಂಡ್ ಮೌಲ್ಯದ ನಕಲಿ ಉಂಗುರವನ್ನು ಅಲ್ಲಿ ಅದಲು ಬದಲು ಮಾಡಿದ್ದಳು. 34 ವರ್ಷದ ಈ ಪೋರ್ನ್‌ ಸ್ಟಾರ್‌ ಗರ್ಭಿಣಿ ಬೇರೆ. ಈಕೆಯ ಹೆಸರು ರೋಮಾ ಲಾಸನ್.

ಸುಮಾರು ಐದು ವಾರಗಳಲ್ಲಿ ಅನೇಕ ಅಂಗಡಿಗಳಲ್ಲಿ ರೋಮಾ ಕಳ್ಳತನ ಮಾಡಿದ್ದಾಳೆ. ಈ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದೆ. ಪೋರ್ನ್‌ ತಾರೆಗೆ 8 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಹಿಂದೆ ರೋಮಾ ಪೊಲೀಸ್‌ ಅಧಿಕಾರಿಯ ಕೈಗೆ ಕಚ್ಚಿದ ಪ್ರಕರಣವೂ ನಡೆದಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಕ್ಯಾಂಟರ್ಬರಿ ಕ್ರೌನ್ ಕೋರ್ಟ್‌ ಈಕೆಯ ಸೆರೆವಾಸದ ಅವಧಿಯನ್ನು ಇನ್ನೂ ನಾಲ್ಕು ತಿಂಗಳು ಹೆಚ್ಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೋಮಾ ಸಾಕುಪ್ರಾಣಿಗಳ ಆಹಾರ, ಮುಖದ ಕ್ಲೆನ್ಸರ್, ಮುತ್ತು, ದುಬಾರಿ ಉಂಗುರ ಹೀಗೆ ಅನೇಕ ವಸ್ತುಗಳನ್ನು ಕಳವು ಮಾಡಿದ್ದಾಳೆ. ಕದಿಯಲು ಬೇರೆ ಬೇರೆ ವಿಧಾನಗಳನ್ನು ಈಕೆ ಬಳಸುತ್ತಿದ್ದಳು. ಕೊಕೇನ್‌ ಅಮಲಿನಲ್ಲಿ ರೋಮಾ ಪೊಲೀಸ್‌ ಅಧಿಕಾರಿಗೆ ಕಚ್ಚಿದ್ದಳು. ಸದ್ಯ ಡ್ರಗ್ಸ್‌ ಚಟಕ್ಕೆ ಬಿದ್ದಿರೋ ಈ ಗರ್ಭಿಣಿ ಇನ್ನು 12 ತಿಂಗಳುಗಳ ಕಾಲ ಜೈಲಿನಲ್ಲೇ ಇರಬೇಕಿದೆ.

For Latest News Updates, Join Our Whatsapp Community🚩
RELATED ARTICLES

Most Popular