HomeKarnatakaತಮಿಳುನಾಡಲ್ಲಿ ಹೊಸ ಯುಗಾರಂಭ : DCM ಡಿ.ಕೆ. ಶಿವಕುಮಾರ್

ತಮಿಳುನಾಡಲ್ಲಿ ಹೊಸ ಯುಗಾರಂಭ : DCM ಡಿ.ಕೆ. ಶಿವಕುಮಾರ್

ಬೆಂಗಳೂರು : ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಆಶ್ಚರ್ಯವಾಗಿದೆ. ಅಲ್ಲಿ ಹೊಸ ಯುಗಾರಂಭವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ತಮಿಳುನಾಡು ಫಲಿತಾಂಶವನ್ನು ಗ್ರಹಿಸಲು ನಮಗೆ ಸಾಧ್ಯವಾಗಲಿಲ್ಲ. ಅಲ್ಲಿನ ಹೊಸ ಪಕ್ಷಕ್ಕೆ ಶೇ. 30 ರಿಂದ 40 ರಷ್ಟು ಮತಗಳು ಹೋಗಬಹುದು ಎಂದು ಅಂದುಕೊಂಡಿದ್ದೆವು. ಆದರೆ ಈ ಪ್ರಮಾಣದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ,” ಎಂದಿದ್ದಾರೆ.

ಕೇರಳದ ಮೇಲೆ ನಮಗೆ ನಂಬಿಕೆ ಇತ್ತು. ಅಲ್ಲಿ ಕಳೆದ 10 ವರ್ಷಗಳಿಂದ ಇದ್ದ ಸರ್ಕಾರವನ್ನು ಬದಲಾಯಿಸಲು ಜನ ಬಯಸಿದ್ದರು. ಇವತ್ತು ನಮಗೆ ದೊಡ್ಡ ಬೆಂಬಲ ಸಿಕ್ಕಿದೆ.ಅಸ್ಸಾಂನಲ್ಲಿ ನಾನು ಪಕ್ಷದ ಜವಾಬ್ದಾರಿ (Party Duty) ನಿರ್ವಹಿಸಿದ್ದೇನೆ. ಅಲ್ಲಿ ನಮಗೆ ಹೆಚ್ಚಿನ ಸೀಟುಗಳ ನಿರೀಕ್ಷೆ ಇತ್ತು. ಸ್ಥಳೀಯವಾಗಿಯೂ 50 ಸ್ಥಾನಗಳ ನಿರೀಕ್ಷೆ ಇತ್ತು. ಆದರೆ ಕ್ಷೇತ್ರ ಪುನರ್ ವಿಂಗಡಣೆ (Delimitation) ನಮಗೆ ಹಿನ್ನಡೆಯಾಗಲು ಕಾರಣವಾಯಿತು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಶ್ಚಿಮ ಬಂಗಾಳದಲ್ಲಿ ವೋಟ್ ಡಿಲೀಟ್ ಮಾಡಿದ್ದಾರೆ ಹಾಗೂ ಇವಿಎಂ ಮೆಷಿನ್‌ಗಳಲ್ಲೂ ಸಮಸ್ಯೆ ಮಾಡಿದ್ದರು. ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ಬಿಜೆಪಿ ಏನೇನೋ ಮಾಡಿದೆ ಎಂದು ಆರೋಪಿಸಿದರು.ದಾವಣಗೆರೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಎಸ್‌ಡಿಪಿಐ ವೋಟ್ ನಮಗೆ ಅಪಾಯಕಾರಿಯಾಗಿದೆ. ನಾವು ಅವರನ್ನು ಲೈಟಾಗಿ ತೆಗೆದುಕೊಂಡಿರಲಿಲ್ಲ. ಇಷ್ಟೊಂದು ಮತಗಳನ್ನು ಅವರು ಪಡೆಯುತ್ತಾರೆ ಎಂದು ಅಂದಾಜಿಸಿರಲಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಉತ್ತಮವಾಗಿ ನಡೆಯುತ್ತಿವೆ ಮತ್ತು ಜನ ಸ್ಪಂದಿಸಿದ್ದಾರೆ. ಈ ಫಲಿತಾಂಶವೇ ಅದಕ್ಕೆ ಸಾಕ್ಷಿ. ಇನ್ನೂ ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇದ್ದು, ನಮಗೆ ಒಳ್ಳೆಯದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular