HomeAstroಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತೆ ಮನೆಯಲ್ಲಿ ಬಳಸುವ ಕನ್ನಡಿ

ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತೆ ಮನೆಯಲ್ಲಿ ಬಳಸುವ ಕನ್ನಡಿ

ವಾಸ್ತು ಶಾಸ್ತ್ರದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಹೇಳಲಾಗಿದೆ. ಕುಟುಂಬ, ಸಾಮಾಜಿಕ, ಕೆಲಸ, ಆರ್ಥಿಕ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗೆ ಪರಿಹಾರ ಹೇಳಲಾಗಿದೆ. ಹಣಕಾಸಿನ ಸಮಸ್ಯೆಗೂ ವಾಸ್ತು ಶಾಸ್ತ್ರದಲ್ಲಿ ಪರಿಹಾರವಿದೆ. ವಾಸ್ತು ಪ್ರಕಾರ ಮನೆಯಲ್ಲಿ ಬಳಸುವ ಕನ್ನಡಿ ಹಣಕಾಸಿನ ಸಮಸ್ಯೆಗೆ ಪರಿಹಾರ ನೀಡಬಲ್ಲದು.

ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ಮನೆಯ ಡೈನಿಂಗ್ ರೂಮಿನಲ್ಲಿ ಕನ್ನಡಿಯನ್ನು ಅಳವಡಿಸಿ. ಕನ್ನಡಿಯಲ್ಲಿ ಮನೆಯ ಡೈನಿಂಗ್ ಟೇಬಲ್ ಸಂಪೂರ್ಣವಾಗಿ ಕಾಣಬೇಕು.

ಆರ್ಥಿಕ ಸಮಸ್ಯೆಯಿಂದ ಹೊರ ಬರಲು ಮನೆಯ ಉತ್ತರ ಹಾಗೂ ಪೂರ್ವದ ಗೋಡೆಗೆ ಕನ್ನಡಿ ಹಾಕಬೇಕು. ಇದ್ರಿಂದ ವ್ಯವಹಾರದಲ್ಲಿ ವೃದ್ಧಿಯಾಗುತ್ತದೆ. ಅಚಾನಕ್ ಧನಲಾಭವಾಗುವ ಸಂಭವವಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯ ಎದುರು ಭಾಗದಲ್ಲಿ ಕನ್ನಡಿಯನ್ನು ಅಳವಡಿಸಬೇಕು. ಇದ್ರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾಗುತ್ತದೆ.

ಕನ್ನಡಿಯನ್ನು ಸರಿಯಾಗಿ ಅಳವಡಿಸದೆ ಹೋದಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕನ್ನಡಿಯನ್ನು ಮನೆಯ ಮುಖ್ಯ ಬಾಗಿಲಿನ ಮುಂದೆ ಹಾಕಬಾರದು. ಹಾಗೆ ಪರಸ್ಪರ ಎದುರು-ಬದಿರು ಕನ್ನಡಿಯನ್ನು ಹಾಕಬಾರದು. ಮಲಗುವ ಕೋಣೆಯ ಮಂಚದ ಹಿಂಭಾಗದಲ್ಲಿ ಕನ್ನಡಿ ಹಾಕಬಾರದು.

For Latest News Updates, Join Our Whatsapp Community🚩
RELATED ARTICLES

Most Popular