HomeLatest Newsಕೇಂದ್ರ ಸರ್ಕಾರದ ಭರ್ಜರಿ ಯೋಜನೆ : ಆಧಾರ್ ಕಾರ್ಡ್ ಇದ್ದರೆ ₹90 ಸಾವಿರದವರೆಗೆ ಸಾಲ ,ಜಸ್ಟ್...

ಕೇಂದ್ರ ಸರ್ಕಾರದ ಭರ್ಜರಿ ಯೋಜನೆ : ಆಧಾರ್ ಕಾರ್ಡ್ ಇದ್ದರೆ ₹90 ಸಾವಿರದವರೆಗೆ ಸಾಲ ,ಜಸ್ಟ್ ಹೀಗೆ ಅರ್ಜಿ ಸಲ್ಲಿಸಿ

ಸ್ವಂತ ಉದ್ಯಮ ಆರಂಭಿಸಲು ಅಥವಾ ಸ್ವಯಂ ಉದ್ಯೋಗ ಮಾಡಿಕೊಳ್ಳಲು ಬಯಸುವವರಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳ ಮೂಲಕ ಸಬ್ಸಿಡಿ ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ.

ಬೀದಿ ವ್ಯಾಪಾರಿಗಳಿಗಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಸ್ವನಿಧಿ ಯೋಜನೆ (PM SVANidhi) ಜಾರಿಗೆ ತಂದಿದೆ. ಈ ಯೋಜನೆಯಡಿ ಯಾವುದೇ ಆಸ್ತಿಯನ್ನು ಅಡಮಾನವಿಡದೆ ₹90 ಸಾವಿರದವರೆಗೆ ಸಾಲ ಪಡೆಯಬಹುದು. ಇದಕ್ಕಾಗಿ ವಿಶೇಷ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನೂ ನೀಡಲಾಗುತ್ತದೆ. ಅಗತ್ಯವಿದ್ದಾಗ ಈ ಕಾರ್ಡ್ ಮೂಲಕ ಹಣವನ್ನು ಬಳಸಿಕೊಳ್ಳಬಹುದು.

2020ರ ಜೂನ್‌ನಲ್ಲಿ ಆರಂಭವಾದ ಈ ಯೋಜನೆಯು ಕೊರೊನಾ ಅವಧಿಯಲ್ಲಿ ವ್ಯಾಪಾರ ಕಳೆದುಕೊಂಡ ಬೀದಿ ವ್ಯಾಪಾರಿಗಳಿಗೆ ಸಾಕಷ್ಟು ನೆರವಾಗಿದೆ. ಪ್ರಸ್ತುತ ಈ ಯೋಜನೆ 2030ರ ಮಾರ್ಚ್‌ವರೆಗೆ ಜಾರಿಯಲ್ಲಿರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

75.5 ಲಕ್ಷ ಮಂದಿಗೆ ಪ್ರಯೋಜನ

ಇದುವರೆಗೆ ದೇಶಾದ್ಯಂತ 75.5 ಲಕ್ಷ ಮಂದಿ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಅವರಿಗೆ ಒಟ್ಟು ₹17,800 ಕೋಟಿಗೂ ಹೆಚ್ಚು ಮೌಲ್ಯದ 1.12 ಕೋಟಿಗೂ ಅಧಿಕ ಸಾಲಗಳನ್ನು ವಿತರಿಸಲಾಗಿದೆ. ಇವರಲ್ಲಿ ಸುಮಾರು 55 ಲಕ್ಷ ಫಲಾನುಭವಿಗಳಿಗೆ ಡಿಜಿಟಲ್ ರೂಪದಲ್ಲಿ ಸಾಲ ಸೌಲಭ್ಯ ಒದಗಿಸಲಾಗಿದೆ.ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವವರಿಗೆ ಬಡ್ಡಿ ಸಬ್ಸಿಡಿ ಮತ್ತು ಕ್ಯಾಶ್‌ಬ್ಯಾಕ್ ಸೌಲಭ್ಯವೂ ದೊರೆಯುತ್ತದೆ. ಈ ಮೂಲಕ ಫಲಾನುಭವಿಗಳಿಗೆ ಸುಮಾರು ₹800 ಕೋಟಿ ಪ್ರಯೋಜನವಾಗಿದೆ.

ಈ ಹಿಂದೆ PM SVANidhi ಯೋಜನೆಯಡಿ ಸಾಲದ ಮಿತಿ ₹80 ಸಾವಿರವಾಗಿತ್ತು. ನಂತರ ಕೇಂದ್ರ ಸರ್ಕಾರ ₹10 ಸಾವಿರ ಹೆಚ್ಚಿಸಿದ್ದು, ಇದೀಗ ಅರ್ಹ ಸಣ್ಣ ವ್ಯಾಪಾರಿಗಳು ₹90 ಸಾವಿರದವರೆಗೆ ಸಾಲ ಪಡೆಯಬಹುದು.ಸಾಲವನ್ನು ಮೂರು ಹಂತಗಳಲ್ಲಿ ಪಡೆಯುವ ಅವಕಾಶವಿದೆ. ಮೊದಲ ಹಂತದಲ್ಲಿ ₹15 ಸಾವಿರ, ಎರಡನೇ ಹಂತದಲ್ಲಿ ₹25 ಸಾವಿರ ಹಾಗೂ ಮೂರನೇ ಹಂತದಲ್ಲಿ ₹50 ಸಾವಿರ ಸಾಲ ಪಡೆಯಬಹುದು.

₹30 ಸಾವಿರ ಮಿತಿಯ ಕ್ರೆಡಿಟ್ ಕಾರ್ಡ್

ಯೋಜನೆಯ ಫಲಾನುಭವಿಗಳಿಗೆ UPIಗೆ ಲಿಂಕ್ ಮಾಡಬಹುದಾದ RuPay ಕ್ರೆಡಿಟ್ ಕಾರ್ಡ್ ಕೂಡ ನೀಡಲಾಗುತ್ತದೆ. ಸಾಲದ ಎರಡು ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದವರಿಗೆ ₹30 ಸಾವಿರದವರೆಗೆ ಕ್ರೆಡಿಟ್ ಮಿತಿ ಹೊಂದಿರುವ ಕಾರ್ಡ್ ನೀಡಲಾಗುತ್ತದೆ.ಇದನ್ನು UPIಗೆ ಲಿಂಕ್ ಮಾಡಿಕೊಂಡು ಬಳಸಬಹುದು. ಚಿಲ್ಲರೆ ಮತ್ತು ಸಗಟು ವಹಿವಾಟುಗಳಿಗೆ ಡಿಜಿಟಲ್ ಪಾವತಿ ಮಾಡಿದಾಗ ಕ್ಯಾಶ್‌ಬ್ಯಾಕ್ ಸೌಲಭ್ಯವೂ ದೊರೆಯುತ್ತದೆ.

ಆಧಾರ್ ಕಾರ್ಡ್ ಇದ್ದರೆ ಸಾಕೇ?

ಸಾಲ ಪಡೆಯಲು ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲ. ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಸಾಲ ಮಂಜೂರಾದ ಬಳಿಕ ಮೊತ್ತವನ್ನು EMI ಮೂಲಕ ಮರುಪಾವತಿ ಮಾಡಬೇಕು. ಅರ್ಹತೆ ಹೊಂದಿರುವವರು ತಮ್ಮ ಸಮೀಪದ ಬ್ಯಾಂಕ್‌ಗೆ ಭೇಟಿ ನೀಡಿ PM SVANidhi ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಅಧಿಕಾರಿಗಳು ಅರ್ಹತೆಯನ್ನು ಪರಿಶೀಲಿಸಿದ ಬಳಿಕ ಸಾಲ ಮಂಜೂರು ಮಾಡುತ್ತಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular