HomeKarnatakaBREAKING : A-1 ಆರೋಪಿ ಪವಿತ್ರಾಗೌಡಗೆ ಲಿಪ್ ಸ್ಟಿಕ್ ಹಚ್ಚಲು ಅವಕಾಶ ನೀಡಿದ್ದ 'PSI' ಗೆ...

BREAKING : A-1 ಆರೋಪಿ ಪವಿತ್ರಾಗೌಡಗೆ ಲಿಪ್ ಸ್ಟಿಕ್ ಹಚ್ಚಲು ಅವಕಾಶ ನೀಡಿದ್ದ ‘PSI’ ಗೆ ನೋಟಿಸ್..!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದೆ. ಎ1 ಆರೋಪಿ ಪವಿತ್ರಾ ಗೌಡಗೆ ಲಿಪ್ ಸ್ಟಿಕ್ ನೀಡಿದ್ದ ಪಿಎಸ್ ಐಗೆ ಇದೀಗ ಸಂಕಷ್ಟ ಎದುರಾಗಿದೆ.

ವಿಜಯನಗರ ಠಾಣೆಯ ಮಹಿಳಾ ಪಿಎಸ್ ಐ ಓರ್ವರಿಗೆ ಕರ್ತವ್ಯ ಲೋಪ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ಮಹಿಳಾ ಪಿ ಎಸ್ ಐ ಆರೋಪಿ ಪವಿತ್ರಾಗೌಡಗೆ ಹಚ್ಚಲು ಲಿಫ್ ಸ್ಟಿಕ್ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಜೂನ್ 15ರಂದು ಆರೋಪಿ ಪವಿತ್ರಾಗೌಡಳನ್ನು ಆರ್.ಆರ್.ನಗರದ ಮನೆಗೆ ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಲಿಪ್ ಸ್ಟಿಕ್ ಹಚ್ಚಿಕೊಂಡು, ಚೆನ್ನಾಗಿ ಮೇಕಪ್ ಮಾಡಿಕೊಂಡು ಹೊರ ಬಂದಿದ್ದರು. ಪವಿತ್ರಾಗೌಡಗೆ ಮಹಿಳಾ ಪಿಎಸ್ ಐ ಲಿಪ್ ಸ್ಟಿಕ್ ಹಚ್ಚಲು ಕೊಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ
ಕರ್ತವ್ಯ ಲೋಪ ಆರೋಪದಲ್ಲಿ ಬೆಂಗಳೂರು ಪಶ್ಚಿಮ ಡಿಸಿಪಿ ಗಿರೀಶ್ ಮಹಿಳಾ ಪಿಎಸ್ ಐ ಗೆ ನೋಟಿಸ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular