HomeInternationalBREAKING: ಪ್ಯಾಲೇಸ್ತೀನ್ ಮೇಲೆ ಮುಂದುವರೆದ ಇಸ್ರೇಲ್ ಕ್ಷಿಪಣಿ ದಾಳಿ: 25 ಮಂದಿ ಸಾವು

BREAKING: ಪ್ಯಾಲೇಸ್ತೀನ್ ಮೇಲೆ ಮುಂದುವರೆದ ಇಸ್ರೇಲ್ ಕ್ಷಿಪಣಿ ದಾಳಿ: 25 ಮಂದಿ ಸಾವು

ರಾಫಾ ಬಳಿಯ ಟೆಂಟ್ ಕ್ಯಾಂಪ್‌ ಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 25 ಮಂದಿ ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ

ಇಸ್ರೇಲಿ ಪಡೆಗಳು ಶುಕ್ರವಾರ ರಾಫಾದ ಉತ್ತರಕ್ಕೆ ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯನ್ನರ ಡೇರೆ ಶಿಬಿರಗಳ ಮೇಲೆ ಶೆಲ್ ದಾಳಿ ಮಾಡಿದ್ದು, ಕನಿಷ್ಠ 25 ಜನರನ್ನು ಕೊಂದಿದೆ ಮತ್ತು 50 ಮಂದಿ ಗಾಯಗೊಳಿಸಿದೆ ಎಂದು ಗಾಜಾದ ಹೀತ್ ಸಚಿವಾಲಯ ತಿಳಿಸಿದೆ,

ರಾಫಾದಲ್ಲಿ ಸಿವಿಲ್ ಡಿಫೆನ್ಸ್ ವಕ್ತಾರರಾದ ಅಹ್ಮದ್ ರಾದ್ವಾನ್ ಪ್ರಕಾರ, ಡೇರೆಗಳಿಂದ ತುಂಬಿರುವ ಕರಾವಳಿ ಪ್ರದೇಶದ ಎರಡು ಸ್ಥಳಗಳಲ್ಲಿ ಶೆಲ್ ದಾಳಿ ನಡೆದ ಬಗ್ಗೆ ರಕ್ಷಣಾ ಕಾರ್ಯಕರ್ತರಿಗೆ ಮಾಹಿತಿ ಬಂದಿದೆ. ದಾಳಿಯಲ್ಲಿ ಮೃತಪಟ್ಟವರ ಮತ್ತು ಗಾಯಗೊಂಡವರ ಸಂಖ್ಯೆಯನ್ನು ಆರೋಗ್ಯ ಸಚಿವಾಲಯ ವರದಿ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿವಿಲ್ ಡಿಫೆನ್ಸ್ ಒದಗಿಸಿದ ದಾಳಿಯ ಸ್ಥಳಗಳು ಇಸ್ರೇಲಿ ಗೊತ್ತುಪಡಿಸಿದ ಸುರಕ್ಷಿತ ವಲಯದ ಹೊರಗಿದ್ದವು. ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಇಸ್ರೇಲ್ ಈ ಹಿಂದೆ ಮೆಡಿಟರೇನಿಯನ್ ಕರಾವಳಿಯ ಗ್ರಾಮೀಣ ಪ್ರದೇಶವಾದ ಮುವಾಸಿಯಲ್ಲಿನ ಮಾನವೀಯ ವಲಯದ ಸುತ್ತಮುತ್ತಲಿನ ಸ್ಥಳಗಳಲ್ಲಿ ಬಾಂಬ್ ದಾಳಿ ಮಾಡಿತ್ತು. ಈ ಪ್ರದೇಶ ಇತ್ತೀಚಿಗೆ ಟೆಂಟ್ ಕ್ಯಾಂಪ್ ಗಳಿಂದ ತುಂಬಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular