ಚಿಕ್ಕಮಗಳೂರು : ಶಾಲಾ ಆವರಣದಲ್ಲೇ ವಿದ್ಯುತ್ ಶಾಕ್ ಗೆ ಬಾಲಕ ಬಲಿಯಾದ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಆಕಾಶ್ (13) ಎಂದು ಗುರುತಿಸಲಾಗಿದೆ. ಶಾಲಾ ಆವರಣದಲ್ಲಿ ಮರದಲ್ಲಿ ನೇರಳೆ ಹಣ್ಣು ಕೀಳಲು ಹೋದಾಗ ಈ ಘಟನೆ ನಡೆದಿದೆ. ನೇರಳೆ ಮರ ಹತ್ತಿದ್ದ ಆಕಾಶ್ ಕೆಳಗೆ ಬೀಳುವಾಗ ವಿದ್ಯುತ್ ತಂತಿ ಹಿಡಿದಿದ್ದಾನೆ.
ವಿದ್ಯುತ್ ತಂತಿ ಹಿಡಿಯುತ್ತಿದ್ದಂತೆ ಆತನಿಗೆ ಕರೆಂಟ್ ಶಾಕ್ ತಗುಲಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.