HomeKarnatakaಪಿಯುಸಿ ಪಾಸಾದವರಿಗೆ ಇಲ್ಲಿದೆ ಗುಡ್ ನ್ಯೂಸ್: HCL ಟೆಕ್ನಾಲಜೀಸ್ ನಲ್ಲಿ ಉದ್ಯೋಗ

ಪಿಯುಸಿ ಪಾಸಾದವರಿಗೆ ಇಲ್ಲಿದೆ ಗುಡ್ ನ್ಯೂಸ್: HCL ಟೆಕ್ನಾಲಜೀಸ್ ನಲ್ಲಿ ಉದ್ಯೋಗ

ಶಿವಮೊಗ್ಗ: 2023 & 2024 ರಲ್ಲಿ 2ನೇ PUC(ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ) ಪಾಸ್ ಆಗಿರುವ ವಿದ್ಯಾರ್ಥಿಗಳು ಐಟಿ ಸೇವೆಗಳು ಮತ್ತು ಅಸೋಸಿಯೇಟ್ ಉದ್ಯೋಗದ ಪಾತ್ರಗಳಿಗಾಗಿ 12 ತಿಂಗಳ ತರಬೇತಿ ಜೊತೆಗೆ ಇಂಟರ್ನಶಿಪ್ ನೀಡಲಾಗುವುದು.

ಇದು ಒಟ್ಟಾರೆ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಿದ್ಧಗೊಳಿಸಲು ಅವರ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದರ ಮೇಲೆ ಕೇಂದ್ರೀಕರಿಸುವ ಕಾರ್ಯಕ್ರಮವಾಗಿದೆ.

ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಗಳು HCLTech ನಲ್ಲಿ ಉದ್ಯೋಗ ಪಡೆಯುತ್ತಾರೆ. ಕೆಲಸ ಮಾಡುವಾಗ ಅಭ್ಯರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು(Degree)  IIIT, BITS Pilani,  AMITY, KL ವಿಶ್ವವಿದ್ಯಾಲಯ ಅಥವಾ SASTRA ವಿಶ್ವವಿದ್ಯಾನಿಲಯದಲ್ಲಿ ಮುಂದುವರಿಸಲು ಆಯ್ಕೆಯನ್ನು ಹೊಂದಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

TechBee ಅಭ್ಯರ್ಥಿಗಳು ಇಂಟರ್ನ್‌ಶಿಪ್ ಸಮಯದಲ್ಲಿ ಪ್ರತಿ ತಿಂಗಳು 10,000 ರೂ. ಸ್ಟೈಫಂಡ್ ಗಳಿಸುತ್ತಾರೆ ಮತ್ತು HCLTech ನಿಂದ ಒಮ್ಮೆ ನೇಮಕಗೊಂಡ ನಂತರ ವಾರ್ಷಿಕ 1.70 – 2.20 ಲಕ್ಷ ರೂ.  ನಡುವೆ ಸಂಬಳವನ್ನು ಗಳಿಸಲು ಪ್ರಾರಂಭಿಸುತ್ತಾರೆ.

ಕರ್ನಾಟಕದಲ್ಲಿ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ದೊಂದಿಗೆ ಒಪ್ಪಂದ ಪ್ರಯುಕ್ತ ಕರ್ನಾಟಕದಲ್ಲಿ HCL TechBee ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

2023 & 2024 ರಲ್ಲಿ PUC 2ನೇ ವರ್ಷ ಪಾಸಾಗಿರುವವರು ಈಗಲೇ ಕೆಳಗಿನ ಲಿಂಕ್‌ ಮೂಲಕ  ನೋಂದಾಯಿಸಿಕೊಳ್ಳಬಹುದು.

ಲಿಂಕ್-  https://bit.ly/TechBeeKSDC

ಕಾರ್ಯಾಗಾರ ನಡೆಯುವ ಸ್ಥಳ : DVS Independent PU College ಶಿವಮೊಗ್ಗ.

ದಿನಾಂಕ : 15-06-2024

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8217478207 / 8722790340 / 9845454471

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular