ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದ್ದು, ದರ್ಶನ್ ಅಂಡ್ ಗ್ಯಾಂಗ್ ನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದೀಗ ರೇಣುಕಾಸ್ವಾಮಿ ಶವ ಸಾಗಿಸಿದ್ದ ವಾಹನವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಶವ ಸಾಗಾಟಕ್ಕೆ ಬಳಸಿದ್ದ ಸ್ಕಾರ್ಪಿಯೋ ವಾಹನವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ವಾಹನ ಪುನೀತ್ ಎಂ ಆರ್ ಎಂಬುವವರ ಹೆಸರಿನಲ್ಲಿದೆ.
ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಂದ ಬಳಿಕ ಆರೋಪಿ ದರ್ಶನ್ ಶವವನ್ನು ಎಲ್ಲಾದ್ರೂ ಎಸೆದು ಬನ್ನಿ 30 ಲಕ್ಷ ಕೊಡುತ್ತೇನೆ ಎಂದು ಆಪ್ತ ಪ್ರದೋಷ್ ಗೆ ಸೂಚನೆ ನೀಡಿದ್ದಾರೆ. ದರ್ಶನ್ ಅಣತಿಯಂತೆ ಗ್ಯಾಂಗ್ ಶವವನ್ನು ಸುಮ್ಮನಹಳ್ಳಿಯಲ್ಲಿರುವ ಮೋರಿ ಒಂದರಲ್ಲಿ ಎಸೆದು ಬರುತ್ತಾರೆ.