HomeIndiaಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿ; ನಟ ರಾಮ್ ಚರಣ್ ವರ್ತನೆಯ ವಿಡಿಯೋ ವೈರಲ್

ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿ; ನಟ ರಾಮ್ ಚರಣ್ ವರ್ತನೆಯ ವಿಡಿಯೋ ವೈರಲ್

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬುನಾಯ್ಡು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತೆಲುಗು ಸ್ಟಾರ್ ರಾಮ್ ಚರಣ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ರಾಮ್ ಚರಣ್ ತಳ್ಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮ್ ಚರಣ್ ಸುತ್ತ ಭದ್ರತಾ ಸಿಬ್ಬಂದಿ ಇದ್ದರೂ ವ್ಯಕ್ತಿಯೊಬ್ಬ ರಾಮ್ ಚರಣ್ ರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು ಅವರನ್ನ ನಟ ಹಿಂದಕ್ಕೆ ತಳ್ಳಿರೋದು ಸೆರೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಮೆಗಾ ಸ್ಟಾರ್ ಚಿರಂಜೀವಿ ಮತ್ತು ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವು ನಾಯಕರು ಚಂದ್ರಬಾಬು ನಾಯ್ಡು ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುತ್ತಿದ್ದ ವೇಳೆ ರಾಮ್ ಚರಣ್ ಹತ್ತಿರ ಬಂದು ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ವ್ಯಕ್ತಿಯೊಬ್ಬ ಮುಂದಾದ. ರಾಮ್ ಚರಣ್ ತಕ್ಷಣ ವ್ಯಕ್ತಿಯನ್ನು ಪಕ್ಕಕ್ಕೆ ಸರಿಸಿ ಸಮಾರಂಭಕ್ಕೆ ತೆರಳುತ್ತಿದ್ದರು. ಶೀಘ್ರದಲ್ಲೇ, ಅವರ ಭದ್ರತಾ ತಂಡವು ವ್ಯಕ್ತಿಯನ್ನು ದೂರವಿಟ್ಟಿತು.

ಇದೇ ವೇಳೆ ಮತ್ತೊಬ್ಬ ವ್ಯಕ್ತಿಯೂ ಸಹ ರಾಮ್ ಚರಣ್ ಜೊತೆ ಚಿತ್ರ ತೆಗೆದುಕೊಳ್ಳಲು ಪ್ರಯತ್ನಿಸಿದ. ಅವನನ್ನೂ ಭದ್ರತಾ ಸಿಬ್ಬಂದಿ ದೂರ ತಳ್ಳಿದರು. ರಾಮ್ ಚರಣ್ ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸುವವರೆಗೂ ಆ ವ್ಯಕ್ತಿಗಳು ನಟನನ್ನು ಹಿಂಬಾಲಿಸುತ್ತಲೇ ಹೋದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ , ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಾಯ್ಡು ಸೇರಿದಂತೆ ಪವನ್ ಕಲ್ಯಾಣ್ ಬೆಂಬಲಿಸಲು ರಾಮ್ ಚರಣ್ ಸಮಾರಂಭದಲ್ಲಿ ಭಾಗಿಯಾಗಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular