HomeEntertainmentBIG NEWS: ವಿಚ್ಛೇದನದ ಬಳಿಕ ಮೊದಲ ಮಾತು...... ಮನಬಿಚ್ಚಿ ಮಾತನಾಡಿದ ಚಂದನ್ ಶೆಟ್ಟಿ-ನಿವೇದಿತಾ ಗೌಡ

BIG NEWS: ವಿಚ್ಛೇದನದ ಬಳಿಕ ಮೊದಲ ಮಾತು…… ಮನಬಿಚ್ಚಿ ಮಾತನಾಡಿದ ಚಂದನ್ ಶೆಟ್ಟಿ-ನಿವೇದಿತಾ ಗೌಡ

ಬೆಂಗಳೂರು: ನಾವು ಕಾನೂನು ಪ್ರಕಾರ ವಿಚ್ಛೇದನ ಪಡೆದಿದ್ದೇವೆ. ಯಾವುದೇ ವದಂತಿಯನ್ನು ಹಬ್ಬಿಸುವುದು ಬೇಡ ಎಂದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದನ್ ಶೆಟ್ಟಿ ಹಾಗೂ ನಿವೇದಿತಾ, ನಮ್ಮಿಬ್ಬರ ಆಲೋಚನೆ, ಜೀವನ ಶೈಲಿ ಬೇರೆ ಬೇರೆಯಾಗಿತ್ತು. ಪದೇ ಪದೇ ಮನಸ್ತಾಪ ಬರುತ್ತಿತ್ತು. ಹಾಗಾಗಿ ಒಟ್ಟಿಗೆ ಇರುವುದು ಸರಿಯಲ್ಲ ಅನಿಸಿತ್ತು. ಹಾಗಾಗಿ ಇಬ್ಬರೂ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ನಿರ್ದರಿಸಿದೆವು ಎಂದು ತಿಳಿಸಿದ್ದಾರೆ.

ಇಬ್ಬರು ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟೆವು. ಆದರೆ ಸಾಧ್ಯವಾಗಿಲ್ಲ. ಡಿವೋರ್ಸ್ ಬಗ್ಗೆ ಸಾಕಷ್ಟು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ ಎಲ್ಲಾ ವದಂತಿಗಳು ಸುಳ್ಳು. ಇಬ್ಬರೂ ಕಾನೂನು ಪ್ರಕಾರ ವಿಚ್ಛೇಧನ ಪಡೆದಿದ್ದೇವೆ. ನಿವೇದಿತಾ ನನ್ನಿಂದ ಕೋಟ್ಯಂತರ ರೂಪಾಯಿ ಜೀವನಾಂಶವನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ. ಇದು ಸುಳ್ಳು. ಆಕೆ ಯಾವುದೇ ಜೀವನಾಂಶವನ್ನು ಕೇಳಿಲ್ಲ. ಇನ್ನು ಮಗುವಿನ ವಿಚಾರಕ್ಕೆ ಡಿವೋರ್ಸ್ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಅದು ಕೂಡ ಕೇವಲ ವದಂತಿ. ನಿವೇದಿತಾಗೆ 3ನೇ ವ್ಯಕ್ತಿ ಜೊತೆ ಸಂಬಂಧವಿದೆ ಎಂದು ಆರೋಪಿಸಲಾಗುತ್ತಿದೆ. ಇಂತಹ ವದಂತಿ ಶೋಭೆತರಲ್ಲ. ದಯವಿಟ್ಟು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ನಾವುಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದೇವೆ. ಬೇಡದಿರುವ ವಿಚಾರಗಳನ್ನು ಸೃಷ್ಟಿಸಿ ಹರಿಬಿಡುವ ಕೆಲಸ ಮಾಡಬೇಡಿ ಎಂದು ಚಂದನ್ ಶೆಟ್ಟಿ ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular