HomeKarnatakaಚಲಿಸುತ್ತಿದ್ದ ಶಾಲಾ ಬಸ್ ನಲ್ಲಿಯೇ ಚಾಲಕನಿಗೆ ಹೃದಯಾಘಾತ

ಚಲಿಸುತ್ತಿದ್ದ ಶಾಲಾ ಬಸ್ ನಲ್ಲಿಯೇ ಚಾಲಕನಿಗೆ ಹೃದಯಾಘಾತ

ಉಡುಪಿ: ಶಾಲಾ ಬಸ್ ಡ್ರೈವ್ ಮಾಡುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತವಾಗಿದ್ದು, ಆದರೂ ತಕ್ಷಣ ಸಮಯ ಪ್ರಜ್ಞೆ ಮೆರೆದ ಚಾಲಕ ಮಕ್ಕಳನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಪೆರಂಪಳ್ಳಿ ಎಂಬಲ್ಲಿ ಈ ಘಟನೆ ನಡೆದಿದೆ. ಬ್ರಹ್ಮಾವರದ ಖಾಸಗಿ ಶಾಲೆಯ ಸುಮಾರು 60 ಮಕ್ಕಳನ್ನು ಕರೆದಿಯ್ಯುತ್ತಿದ್ದ ಬಸ್ ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ಹೋಗುತ್ತಿತ್ತು. ದಾರಿಯಲ್ಲಿ ಐವರು ಮಕ್ಕ್ಳನ್ನು ಇಳಿಸಿದ ಬಸ್, ಪೆರಂಪಳ್ಳಿ ಬಳಿ ಹೋಗುತ್ತಿದ್ದಾಗ ಚಾಲಕ ಅಲ್ವಿನ್ ಡಿಸೋಜಾಗೆ ಲಘು ಹೃದಯಾಘಾತವಾಗಿದೆ.

ಕೂಡಲೇ ಎಚ್ಚೆತ್ತ ಚಾಲಕ ಬಸ್ಸನ್ನು ರಸ್ತೆ ಬದಿಯ ಚರಂಡಿ ಬಳಿ ನಿಲ್ಲಿಸಿದ್ದಾರೆ.ತೀವ್ರವಾಗಿ ಅಸ್ವಸ್ಥಗೊಂಡ ಚಾಲಕನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಮಣಿಪಾಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular