HomeKarnatakaBREAKING : ಬೆಂಗಳೂರು 'ರೇವ್ ಪಾರ್ಟಿ' ಪ್ರಕರಣ : ನಟಿ ಹೇಮಾ 24 ಗಂಟೆ 'CCB'...

BREAKING : ಬೆಂಗಳೂರು ‘ರೇವ್ ಪಾರ್ಟಿ’ ಪ್ರಕರಣ : ನಟಿ ಹೇಮಾ 24 ಗಂಟೆ ‘CCB’ ಕಸ್ಟಡಿಗೆ..!

ಬೆಂಗಳೂರು : ಬೆಂಗಳೂರಿನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ಸದ್ಯ ನಟಿ ಹೇಮಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಟಿ ಹೇಮಾ ಅವರನ್ನು 24 ಗಂಟೆ ಸಿಸಿಬಿ ಕಸ್ಟಡಿಗೆ ನೀಡಿ  ಅನೇಕಲ್ ನ ಜೆಎಂಎಫ್ ಸಿ   ಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ನಟಿ ಹೇಮಾ ಹೆಸರು ಕೇಳಿ ಬಂದಾಗ ಆಕೆ ಆ ಸಂದರ್ಭದಲ್ಲಿ ನಾನು ಹೈದರಾಬಾದ್ ಫಾರ್ಮ್ ಹೌಸ್ ನಲ್ಲಿ ಇದ್ದೆ ಎಂದು ಹೇಳಿದ್ದರು.

ಆದರೆ ಸಿಸಿಬಿ ಪೊಲೀಸರು ತಮಗೆ ಸಿಕ್ಕ ಖಚಿತ ಸಾಕ್ಷ್ಯಾಧಾರಗಳ ಮೇಲೆ ಹಾಗೂ ವೈದ್ಯಕೀಯ ಪರೀಕ್ಷೆ ಮೊದಲಾದವನ್ನು ಪರಿಗಣಿಸಿ ಹೇಮಾ ವಿಚಾರಣೆಗೆ ಹಾಜರಾದ ವೇಳೆ ಅವರನ್ನು ಬಂಧಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular