HomeInternationalಜೀವಂತ ಮೊಸಳೆಯನ್ನು ನುಂಗಿದ ಹೆಬ್ಬಾವು; ಬೆಚ್ಚಿ ಬೀಳಿಸುವಂತಿದೆ ವೈರಲ್ ವಿಡಿಯೋ

ಜೀವಂತ ಮೊಸಳೆಯನ್ನು ನುಂಗಿದ ಹೆಬ್ಬಾವು; ಬೆಚ್ಚಿ ಬೀಳಿಸುವಂತಿದೆ ವೈರಲ್ ವಿಡಿಯೋ

ಪ್ರಾಣಿಗಳ ಅಸಾಧಾರಣ ನಡವಳಿಕೆಯು ಕೆಲವೊಮ್ಮೆ ಅಚ್ಚರಿ ತರಿಸುತ್ತದೆ. ಅಂತಹ ಹಲವಾರು ಪ್ರಸಂಗ/ಘಟನೆಯ ವಿಡಿಯೋಗಳು ಆಗಾಗ್ಗೆ ಇಂಟರ್ನೆಟ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಕಾಡಿನಲ್ಲಿ ಮೊಸಳೆ ಮತ್ತು ಹೆಬ್ಬಾವು ನಡುವಿನ ಅಸಾಧಾರಣ ಕಾಳಗವನ್ನು ತೋರಿಸುವ ವಿಡಿಯೋ ಇತ್ತೀಚಿಗೆ ವೈರಲ್ ಆಗಿದ್ದು ನೆಟ್ಟಿಗರನ್ನ ನಿಬ್ಬೆರಗಾಗಿಸಿದೆ.

ದೈತ್ಯ ಕಾಡು ಪ್ರಾಣಿಗಳ ಮಾರಣಾಂತಿಕ ವರ್ತನೆ ವೀಡಿಯೊದಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ ಹೆಬ್ಬಾವು ಮೊಸಳೆಯನ್ನು ನುಂಗಲು ಪ್ರಯತ್ನಿಸಿದೆ. ಅದರಿಂದ ಬಿಡಿಸಿಕೊಳ್ಳಲು ಮೊಸಳೆ ಸಹ ಹೋರಾಡಿದೆ. ಆದರೆ ಈ ದಾಳಿ ಮತ್ತು ತಪ್ಪಿಸಿಕೊಳ್ಳುವ ಹೋರಾಟದಲ್ಲಿ ಅಂತಿಮವಾಗಿ ಹೆಬ್ಬಾವು ಗೆದ್ದಿದ್ದು ಮೊಸಳೆಯನ್ನು ಸಾಯಿಸಿ ಸಂಪೂರ್ಣವಾಗಿ ನುಂಗಿಹಾಕಿದೆ.

ಈ ವಿಡಿಯೋ ನೋಡಿ ಬೆಚ್ಚಿಬಿದ್ದ ಇಂಟರ್ನೆಟ್ ಬಳಕೆದಾರರು “ಹೆಬ್ಬಾವು ಇದನ್ನು ಜೀರ್ಣಿಸಿಕೊಳ್ಳಲು ತಿಂಗಳುಗಳೇ ಬೇಕಾಗಬಹುದು” ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular