HomeKarnatakaBIG NEWS : ಬೆಂಗಳೂರಲ್ಲಿ CCB ‘ಮಿಡ್ ನೈಟ್ ಆಪರೇಷನ್’ ; 100 ಕ್ಕೂ ಹೆಚ್ಚು...

BIG NEWS : ಬೆಂಗಳೂರಲ್ಲಿ CCB ‘ಮಿಡ್ ನೈಟ್ ಆಪರೇಷನ್’ ; 100 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ.!

ಬೆಂಗಳೂರು : ಬೆಂಗಳೂರಲ್ಲಿ ‘ಮಿಡ್ ನೈಟ್ ಆಪರೇಷನ್’    ನಡೆಸಿದ ಸಿಸಿಬಿ ಪೊಲೀಸರು 100 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡಿದ್ದಾರೆ.

ಅಕ್ರಮವಾಗಿ ಬೆಂಗಳೂರಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗಳ ಮನೆ ಮೇಲೆ ಸಿಸಿಬಿ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿದ್ದಾರೆ. ಬಾಂಗ್ಲಾ ಗಡಿಭಾಗದಲ್ಲಿ ಸುಸುಳಿ ಅಕ್ರಮವಾಗಿ ಬಂದು ಬೆಂಗಳೂರಿಗೆ ನೆಲೆಸಿದ್ದಾರೆ. ಯಾವುದೇ ಸೂಕ್ತ ದಾಖಲೆ ಇಲ್ಲದೇ ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು.

ಗುಪ್ತಚರದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿದ್ದಾರೆ. ಸಿಸಿಬಿ ಜಂಟಿ ಆಯುಕ್ತ ಚಂದ್ರಗುಪ್ತ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಹಾಗೂ ಇವರಿಗೆ ಬಾಡಿಗೆ ನೀಡಿದ ಮನೆ ಮಾಲೀಕರನ್ನು ಕೂಡ ವಿಚಾರಿಸಲಾಗಿದೆ ಎಂದು ತಿಳಿದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular