alex Certify Viral Video | ಹುಡುಗಿಯ ಶ್ವಾಸಕೋಶದಲ್ಲಿತ್ತು ಸೂಜಿ; ಬ್ರಾಂಕೋಸ್ಕೋಪಿ ಮೂಲಕ ಕೇವಲ 4 ನಿಮಿಷಗಳಲ್ಲಿ ಹೊರ ತೆಗೆದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಹುಡುಗಿಯ ಶ್ವಾಸಕೋಶದಲ್ಲಿತ್ತು ಸೂಜಿ; ಬ್ರಾಂಕೋಸ್ಕೋಪಿ ಮೂಲಕ ಕೇವಲ 4 ನಿಮಿಷಗಳಲ್ಲಿ ಹೊರ ತೆಗೆದ ವೈದ್ಯರು

ವೈದ್ಯಕೀಯ ಲೋಕದಲ್ಲಿ ಒಂದಿಲ್ಲೊಂದು ಹೊಸ ಹೊಸ ಆವಿಷ್ಕಾರಗಳಾಗುತ್ತಲೇ ಇರುತ್ತವೆ. ಇದೀಗ ತಂಜಾವೂರು ಖಾಸಗಿ ಆಸ್ಪತ್ರೆಯ ವೈದ್ಯರು ಅದ್ಭುತ ಸಾಧನೆ ಮಾಡಿದ್ದಾರೆ. 14 ವರ್ಷದ ಬಾಲಕಿಯ ಶ್ವಾಸಕೋಶದಲ್ಲಿದ್ದ 4 ಸೆಂಮೀ ಉದ್ದದ ಸೂಜಿಯನ್ನು ಕೇವಲ ಮೂರೂವರೆ ನಿಮಿಷಗಳಲ್ಲಿ ಹೊರತೆಗೆದಿದ್ದಾರೆ. ಈ ಪ್ರಕ್ರಿಯೆಗೆ ವೈದ್ಯರು ಚಾಕು ಸಹ ಬಳಸಿಲ್ಲ ಎಂಬುದು ಗಮನಾರ್ಹ.

ಡ್ರೆಸ್ಸಿಂಗ್‌ ಮಾಡುವ ಸಂದರ್ಭದಲ್ಲಿ ಬಾಲಕಿ ಆಕಸ್ಮಿಕವಾಗಿ ಸೂಜಿಯನ್ನು ನುಂಗಿಬಿಟ್ಟಿದ್ದಳು. ಚಾಕು ಮತ್ತು ಕತ್ತರಿಯಂತಹ ಸಾಧನಗಳನ್ನು ಬಳಸದೆ ಆಧುನಿಕ ಬ್ರಾಂಕೋಸ್ಕೋಪಿ ಎಂಬ ವಿಧಾನದ ಮೂಲಕ ವೈದ್ಯರು ತಕ್ಷಣವೇ ಈ ಸೂಜಿಯನ್ನು ಹೊರತೆಗೆದಿದ್ದಾರೆ. ತಮಿಳುನಾಡಿನ ತಂಜಾವೂರು ಆಸ್ಪತ್ರೆಯಲ್ಲಿ ನಡೆದ ಘಟನೆ ಇದು. ವೈದ್ಯರ ಕಾರ್ಯವೈಖರಿ ಮತ್ತು ಸಮಯ ಪ್ರಜ್ಞೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿಕಿತ್ಸೆಯ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್‌ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...