HomeIndiaViral Video | ಹುಡುಗಿಯ ಶ್ವಾಸಕೋಶದಲ್ಲಿತ್ತು ಸೂಜಿ; ಬ್ರಾಂಕೋಸ್ಕೋಪಿ ಮೂಲಕ ಕೇವಲ 4 ನಿಮಿಷಗಳಲ್ಲಿ ಹೊರ...

Viral Video | ಹುಡುಗಿಯ ಶ್ವಾಸಕೋಶದಲ್ಲಿತ್ತು ಸೂಜಿ; ಬ್ರಾಂಕೋಸ್ಕೋಪಿ ಮೂಲಕ ಕೇವಲ 4 ನಿಮಿಷಗಳಲ್ಲಿ ಹೊರ ತೆಗೆದ ವೈದ್ಯರು

ವೈದ್ಯಕೀಯ ಲೋಕದಲ್ಲಿ ಒಂದಿಲ್ಲೊಂದು ಹೊಸ ಹೊಸ ಆವಿಷ್ಕಾರಗಳಾಗುತ್ತಲೇ ಇರುತ್ತವೆ. ಇದೀಗ ತಂಜಾವೂರು ಖಾಸಗಿ ಆಸ್ಪತ್ರೆಯ ವೈದ್ಯರು ಅದ್ಭುತ ಸಾಧನೆ ಮಾಡಿದ್ದಾರೆ. 14 ವರ್ಷದ ಬಾಲಕಿಯ ಶ್ವಾಸಕೋಶದಲ್ಲಿದ್ದ 4 ಸೆಂಮೀ ಉದ್ದದ ಸೂಜಿಯನ್ನು ಕೇವಲ ಮೂರೂವರೆ ನಿಮಿಷಗಳಲ್ಲಿ ಹೊರತೆಗೆದಿದ್ದಾರೆ. ಈ ಪ್ರಕ್ರಿಯೆಗೆ ವೈದ್ಯರು ಚಾಕು ಸಹ ಬಳಸಿಲ್ಲ ಎಂಬುದು ಗಮನಾರ್ಹ.

ಡ್ರೆಸ್ಸಿಂಗ್‌ ಮಾಡುವ ಸಂದರ್ಭದಲ್ಲಿ ಬಾಲಕಿ ಆಕಸ್ಮಿಕವಾಗಿ ಸೂಜಿಯನ್ನು ನುಂಗಿಬಿಟ್ಟಿದ್ದಳು. ಚಾಕು ಮತ್ತು ಕತ್ತರಿಯಂತಹ ಸಾಧನಗಳನ್ನು ಬಳಸದೆ ಆಧುನಿಕ ಬ್ರಾಂಕೋಸ್ಕೋಪಿ ಎಂಬ ವಿಧಾನದ ಮೂಲಕ ವೈದ್ಯರು ತಕ್ಷಣವೇ ಈ ಸೂಜಿಯನ್ನು ಹೊರತೆಗೆದಿದ್ದಾರೆ. ತಮಿಳುನಾಡಿನ ತಂಜಾವೂರು ಆಸ್ಪತ್ರೆಯಲ್ಲಿ ನಡೆದ ಘಟನೆ ಇದು. ವೈದ್ಯರ ಕಾರ್ಯವೈಖರಿ ಮತ್ತು ಸಮಯ ಪ್ರಜ್ಞೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿಕಿತ್ಸೆಯ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್‌ ಆಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular