HomeKarnatakaBIG NEWS : 'SSLC' ವಿದ್ಯಾರ್ಥಿಗಳ ಗಮನಕ್ಕೆ : ಪರೀಕ್ಷೆ-2 ರ ನೋಂದಣಿ ದಿನಾಂಕ ವಿಸ್ತರಣೆ

BIG NEWS : ‘SSLC’ ವಿದ್ಯಾರ್ಥಿಗಳ ಗಮನಕ್ಕೆ : ಪರೀಕ್ಷೆ-2 ರ ನೋಂದಣಿ ದಿನಾಂಕ ವಿಸ್ತರಣೆ

ಬೆಂಗಳೂರು :   2024 ರ ಎಸ್ ಎಸ್ ಎಲ್ ಸಿ ಪರೀಕ್ಷೆ-2 ಕ್ಕೆ ನೋಂದಾಯಿಸಿಕೊಂಡು ಪರೀಕ್ಷೆಗೆ ಗೈರು ಪೂರ್ಣಗೊಳಿಸಲಾಗಿಲ್ಲದ [Not Completed] / ಹಿಂದಿನ ಸಾಲಿನಲ್ಲಿ ಹಾಜರಾದ / ಅನುತ್ತೀರ್ಣರಾದ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ಅಭ್ಯರ್ಥಿಗಳಿಗೆ 2024ರ ಜೂನ್ ಮಾಹೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-2ನ್ನು ನಡೆಸುವ ಸಂಬಂಧ ಅರ್ಹ ಪುನರಾವರ್ತಿತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಉಲ್ಲೇಖ-1 &2 ರಂತೆ ಅಹ್ವಾನಿಸಲಾಗಿರುತ್ತದೆ.

ಸದರಿ ಉಲ್ಲೇಖಿತ ಮಾರ್ಗಸೂಚಿಯಲ್ಲಿ ಪರೀಕ್ಷಾ ಶುಲ್ಕ ಪಾವತಿಗಾಗಿ ನಿಗಧಿಪಡಿಸಿರುವ ದಿನಾಂಕಗಳನ್ನು ಈ ಕೆಳಕಂಡಂತೆ ವಿಸ್ತರಿಸಿದೆ.

ಆನ್‌ಲೈನ್‌ನಲ್ಲಿ ಪರೀಕ್ಷಾ ಅರ್ಜಿಯನ್ನು ನೋಂದಾಯಿಸಲು ಹಾಗೂ NEFT ಚಲನ್ ಮೂಲಕ ಬ್ಯಾಂಕ್‌ಗೆ ಪರೀಕ್ಷಾ ಶುಲ್ಕ ಪಾವತಿಸಲು ನಿಗಧಿಪಡಿಸಿರುವ ದಿನಾಂಕಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇಲೆ ವಿವರಿಸಿರುವಂತೆ ವಿಸ್ತರಿಸಿರುವ ದಿನಾಂಕದವರೆಗೆ ವಿದ್ಯಾರ್ಥಿಗಳ ನೋಂದಣಿ ಮಾಡತಕ್ಕದು. ಈ ಕುರಿತು ತಮ್ಮ ವ್ಯಾಪ್ತಿಗೆ ಬರುವ ಶಾಲಾ ಮುಖ್ಯೋಪಾಧ್ಯಾಯರು ಮುಖಾಂತರ ವಿದ್ಯಾರ್ಥಿಗಳ/ ಪೋಷಕರ ಗಮನಕ್ಕೆ ತಂದು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು/ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ತಿಳಿಸಿದೆ. ಮತ್ತೆ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ತಿಳಿಸಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular