alex Certify ಐಪಿಎಲ್ ನಾಕ್ ಔಟ್ ವೇಳಾಪಟ್ಟಿ ಪ್ರಕಟ: RCB- RR ನಡುವೆ ಎಲಿಮಿನೇಟರ್ ಪಂದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ನಾಕ್ ಔಟ್ ವೇಳಾಪಟ್ಟಿ ಪ್ರಕಟ: RCB- RR ನಡುವೆ ಎಲಿಮಿನೇಟರ್ ಪಂದ್ಯ

ಅಹ್ಮದಾಬಾದ್: 17ನೇ ಆವೃತ್ತಿ ಐಪಿಎಲ್ ನ ಪ್ಲೇ ಆಫ್ ವೇಳಾಪಟ್ಟಿ ಅಂತಿಮಗೊಂಡಿದೆ. ಆರ್‌ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಬುಧವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಾಡಲಿದೆ.

ಮಾರ್ಚ್ 22ರಂದು ಆರಂಭವಾದ ಐಪಿಎಲ್ ಲೀಗ್ ಹಂತದ ಪಂದ್ಯಗಳು ಭಾನುವಾರ ಮುಕ್ತಾಯವಾಗಿವೆ. ಅಗ್ರಸ್ಥಾನ ಪಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಎರಡನೇ ಸ್ಥಾನ ಪಡೆದ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮಂಗಳವಾರ ಅಹಮದಾಬಾದ್ ನಲ್ಲಿ ಕ್ವಾಲಿಫಿಯರ್ -1ರಲ್ಲಿ ಮುಖಾಮುಖಿಯಾಗಲಿವೆ. ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ.

ಗುಂಪಿನಲ್ಲಿ 3ನೇ ಸ್ಥಾನ ಪಡೆದ ರಾಜಸ್ಥಾನ ರಾಯಲ್ಸ್ ಮತ್ತು ನಾಲ್ಕನೇ ಸ್ಥಾನ ಪಡೆದ ಆರ್ಸಿಬಿ ಮೇ 22 ರಂದು ಅಹಮದಾಬಾದ್ ನಲ್ಲಿ ನಡೆಯುವ ಎಲಿಮಿನೇಟರ್ ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್ -2ಕ್ಕೆ ಪ್ರವೇಶಿಸಲಿದೆ. ಕ್ವಾಲಿಫೈಯರ್-1ರಲ್ಲಿ ಸೋತ ತಂಡದ ವಿರುದ್ಧ ಶುಕ್ರವಾರ ಚೆನ್ನೈನಲ್ಲಿ ಮುಖಮುಖಾಗಲಿದೆ. ಗೆದ್ದ ತಂಡ ಫೈನಲ್ ಪ್ರವೇಶಿಸಲಿದ್ದು, ಮೇ 26ರಂದು ಚೆನ್ನೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...