HomeInternationalಚೀನಾದಲ್ಲಿ ಭಾರೀ ಮಳೆಯಿಂದ ಹೆದ್ದಾರಿ ಕುಸಿತ: ಸಾವಿನ ಸಂಖ್ಯೆ 36 ಕ್ಕೆ ಏರಿಕೆ

ಚೀನಾದಲ್ಲಿ ಭಾರೀ ಮಳೆಯಿಂದ ಹೆದ್ದಾರಿ ಕುಸಿತ: ಸಾವಿನ ಸಂಖ್ಯೆ 36 ಕ್ಕೆ ಏರಿಕೆ

ಬೀಜಿಂಗ್: ಚೀನಾದ ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿತದದಲ್ಲಿ ಮೃತಪಟ್ಟವರ ಸಂಖ್ಯೆ 36 ಕ್ಕೆ ಏರಿದೆ, ಹಲವಾರು ಕಾರ್ ಗಳು ಇಳಿಜಾರಿನಲ್ಲಿ ಉರುಳಿ ಬಿದ್ದಿವೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ, ಗುವಾಂಗ್‌ಡಾಂಗ್‌ನ ಮೀಝೌ ನಗರದಲ್ಲಿ ಹೆದ್ದಾರಿಯ 17.9-ಮೀಟರ್ ಉದ್ದದ ಭಾಗವು ಕುಸಿದ ನಂತರ ಸಾವಿನ ಸಂಖ್ಯೆ ಏರಿಕೆಯಾಗಿದೆ. ಬುಧವಾರ ಮುಂಜಾನೆ 2 ಗಂಟೆಗೆ ಹೆದ್ದಾರಿಯ 17.9 ಮೀಟರ್ ಉದ್ದದ ಭಾಗವನ್ನು ಕುಸಿದು 23 ವಾಹನಗಳು ಉರುಳಿವೆ ಎಂದು ಮೀಝೌ ನಗರ ಸರ್ಕಾರ ತಿಳಿಸಿದೆ.

ಕನಿಷ್ಠ 30 ಜನರಿಗೆ ಗಾಯಗಳಾಗಿವೆ, ಗುವಾಂಗ್‌ಡಾಂಗ್ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಕಳೆದ ಎರಡು ವಾರಗಳಲ್ಲಿ ದಾಖಲೆಯ ಮಳೆ ಮತ್ತು ಪ್ರವಾಹ ಉಂಟಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular