HomeAutoಕೊರತೆ ಹಿನ್ನಲೆ ಪೆಟ್ರೋಲ್, ಡೀಸೆಲ್ ಮಾರಾಟಕ್ಕೆ ನಿರ್ಬಂಧ: ಬೈಕ್ ಗೆ 200 ರೂ., ಕಾರ್ ಗೆ...

ಕೊರತೆ ಹಿನ್ನಲೆ ಪೆಟ್ರೋಲ್, ಡೀಸೆಲ್ ಮಾರಾಟಕ್ಕೆ ನಿರ್ಬಂಧ: ಬೈಕ್ ಗೆ 200 ರೂ., ಕಾರ್ ಗೆ 500 ರೂ.ವರೆಗೆ ಮಾತ್ರ ಪೆಟ್ರೋಲ್

 ಅಗರ್ತಲಾ: ತ್ರಿಪುರಾ ಸರ್ಕಾರ ಬುಧವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ನಿರ್ಬಂಧ ಹೇರಿದೆ. ಸರಕು ಸಾಗಣೆ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿ ಈಶಾನ್ಯ ರಾಜ್ಯದಲ್ಲಿ ಇಂಧನ ದಾಸ್ತಾನು ಕಡಿಮೆಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಅಸ್ಸಾಂನ ಜಟಿಂಗಾದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ತ್ರಿಪುರಾಗೆ ಸರಕು ರೈಲುಗಳ ಸಂಚಾರಕ್ಕೆ ಪರಿಣಾಮ ಬೀರಿದೆ. ಪುನಃಸ್ಥಾಪನೆ ಕಾರ್ಯದ ನಂತರ ಏಪ್ರಿಲ್ 26 ರಂದು ಪ್ಯಾಸೆಂಜರ್ ರೈಲು ಸಂಚಾರ ಪ್ರಾರಂಭವಾಯಿತು ಆದರೆ, ಜಟಿಂಗ ಮೂಲಕ ರೈಲು ಸೇವೆಯು ರಾತ್ರಿಯ ಸಮಯದಲ್ಲಿ ಇನ್ನೂ ಆರಂಭವಾಗಿಲ್ಲ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ದಿನಕ್ಕೆ 200 ರೂ., ನಾಲ್ಕು ಚಕ್ರದ ವಾಹನಗಳಿಗೆ ದಿನಕ್ಕೆ 500 ರೂ.ನಂತೆ ಪೆಟ್ರೋಲ್ ಸಿಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೆಟ್ರೋಲ್ ಪಂಪ್‌ ಗಳಿಗೆ ದಿನಕ್ಕೆ ಒಂದು ಬಸ್‌ಗೆ ಕೇವಲ 60 ಲೀಟರ್ ಡೀಸೆಲ್ ಮಾರಾಟ ಮಾಡಲು ತಿಳಿಸಲಾಗಿದೆ, ಮಿನಿ ಬಸ್‌ಗಳಿಗೆ 40 ಲೀಟರ್ ಮತ್ತು ಆಟೋರಿಕ್ಷಾ ಮತ್ತು ತ್ರಿಚಕ್ರ ವಾಹನಗಳಿಗೆ ದಿನಕ್ಕೆ 15 ಲೀಟರ್ ಮಾರಾಟ ಮಾಡಲು ತಿಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular