HomeKarnatakaBIG NEWS: ದಾಖಲೆ ಇಲ್ಲದ 23 ಲಕ್ಷ ಹಣ, 450 ಗ್ರಾಂ ಚಿನ್ನ ಜಪ್ತಿ

BIG NEWS: ದಾಖಲೆ ಇಲ್ಲದ 23 ಲಕ್ಷ ಹಣ, 450 ಗ್ರಾಂ ಚಿನ್ನ ಜಪ್ತಿ

ಬಳ್ಳಾರಿ: ದಾಖಲೆಯಿಲ್ಲದೇ ಸಂಗ್ರಹಿಸಿದ್ದ 23 ಲಕ್ಷ ಹಣವನ್ನು ಬಳ್ಳಾರಿಯಲ್ಲಿ ಬ್ರೂಸ್ ಪೇಟೆ ಪೊಲೀಸರು ಹಾಗೂ ಎಫ್ ಎಸ್ ಟಿ ಹಾಗೂ ವಿವಿಎಸ್ ಟಿ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದೆ.

ಒಟ್ಟು 23 ಲಕ್ಷ ನಗದು ಹಣ, 450 ಗ್ರಾಂ ಚಿನ್ನ, 13 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಕಂಬಳಿ ಬಜಾರ್ ನ ಚುನ್ನಿಲಾಲ್ ರಾಕೇಶ್ ಕುಮಾರ್ ಷಾ ಜುವೆಲ್ಲರ್ಸ್ ನ ಮಾಲೀಕ ಕಮಲೇಶ್ ಜೈನ್ ಎಂಬುವವರ ಮನೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಣ, ಚಿನ್ನ, ಬೆಳ್ಳಿಯನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಈ ಬಗ್ಗೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular