HomeIndia63 ಎಸೆತದಲ್ಲಿ 124 ರನ್: ಸ್ಟೋಯ್ನಿಸ್ ಆರ್ಭಟಕ್ಕೆ ದಾಖಲೆ ಉಡೀಸ್

63 ಎಸೆತದಲ್ಲಿ 124 ರನ್: ಸ್ಟೋಯ್ನಿಸ್ ಆರ್ಭಟಕ್ಕೆ ದಾಖಲೆ ಉಡೀಸ್

ಚೆನ್ನೈ: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಆರು ವಿಕೆಟ್ ಜಯ ಸಾಧಿಸಿದೆ.

ಈ ಋತುವಿನಲ್ಲಿ ಚೆನ್ನೈ ತಂಡಕ್ಕೆ ತವರಲ್ಲಿ ಮೊದಲ ಸೋಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಋತುರಾಜ್ ಗಾಯಕ್ವಾಡ್ ಅಜೇಯ 108, ಶಿವಂ ದುಬೆ 66 ರನ್ ಗಳಿಸಿದರು.

211 ರನ್ ಗೆಲುವಿನ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ತಂಡ ಅಬ್ಬರಿಸಿ ಬೊಬ್ಬಿರಿದು 19.3 ಓವರ್ ಗಳಲ್ಲಿ4 ವಿಕೆಟ್ ಗೆ 213 ರನ್ ಗಳಿಸಿ ಭರ್ಜರಿ ಜಯ ದಾಖಲಿಸಿದೆ. ಮಾರ್ಕಸ್ ಸ್ಟೋಯ್ನಿಸ್ 63 ಎಸೆತಗಳಲ್ಲಿ ಅಜೇಯ 124 ರನ್ ಗಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಶತಕ ಬಾರಿಸಿದ ಮೊದಲ ನಾಯಕ ಋತುರಾಜ್ ಗಾಯಕ್ವಾಡ್ ಆಗಿದ್ದಾರೆ.

ಐಪಿಎಲ್ ಪಂದ್ಯ ಒಂದರಲ್ಲಿ ಎರಡು ಶತಕ ದಾಖಲಾಗಿದ್ದು ಇದು ಏಳನೇ ಬಾರಿ. ಈ ಐಪಿಎಲ್ ನಲ್ಲಿ ಮೂರನೇ ಸಲ ಆಗಿದೆ.

ಮಾರ್ಕಸ್ ಸ್ಟೋಯ್ನಿಸ್ ಇಂಡಿಯನ್ ಪ್ರೀಮಿಯರ್ ಲೀಗ್‌ ನ ಇತಿಹಾಸದಲ್ಲಿ ಸ್ಕೋರ್ ಅನ್ನು ಬೆನ್ನಟ್ಟುವ ಸಂದರ್ಭದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ನ ಸಾರ್ವಕಾಲಿಕ ಐಪಿಎಲ್ ದಾಖಲೆಯನ್ನು ಮುರಿದರು.

ಸ್ಟೋಯ್ನಿಸ್ 56 ಎಸೆತಗಳಲ್ಲಿ ತಮ್ಮ ಶತಕ ಗಳಿಸಿದರು. ಐಪಿಎಲ್ ಪಂದ್ಯವೊಂದರಲ್ಲಿ ಯಶಸ್ವಿ ರನ್ ಚೇಸ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಪಾಲ್ ವಾಲ್ತಾಟಿ ಅವರ 13 ವರ್ಷಗಳ ಹಳೆಯ ದಾಖಲೆಯನ್ನು ಸ್ಟೋಯ್ನಿಸ್ ಮುರಿದಿದ್ದಾರೆ. ವಾಲ್ತಾಟಿ 2011 ರಲ್ಲಿ CSK ವಿರುದ್ಧ 120* ರನ್ ಗಳಿಸಿದ್ದರು.

ಐಪಿಎಲ್‌ನಲ್ಲಿ ಯಶಸ್ವಿ ರನ್ ಚೇಸ್‌ನಲ್ಲಿ ಗರಿಷ್ಠ ಸ್ಕೋರ್:

124* – ಮಾರ್ಕಸ್ ಸ್ಟೊಯಿನಿಸ್ (LSG) ವಿರುದ್ಧ CSK, ಚೆನ್ನೈ, 2024

120* – ಪಾಲ್ ವಾಲ್ತಾಟಿ (PBKS) ವಿರುದ್ಧ CSK, ಮೊಹಾಲಿ, 2011

119 – ವೀರೇಂದ್ರ ಸೆಹ್ವಾಗ್ (DC) ವಿರುದ್ಧ ಡೆಕ್ಕನ್ ಚಾರ್ಜರ್ಸ್, ಹೈದರಾಬಾದ್, 2011

119 – ಸಂಜು ಸ್ಯಾಮ್ಸನ್ (RR) ವಿರುದ್ಧ PBKS, ಮುಂಬೈ WS, 2021

117* – ಶೇನ್ ವ್ಯಾಟ್ಸನ್ (CSK) vs SRH, ಮುಂಬೈ WS, 2018 ಫೈನಲ್

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular