alex Certify ನಮ್ಮ ವೇದ ಪುರಾಣಗಳು ಹೇಳುವ 33 ಕೋಟಿ ದೇವರುಗಳು ಯಾವುವು….? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮ ವೇದ ಪುರಾಣಗಳು ಹೇಳುವ 33 ಕೋಟಿ ದೇವರುಗಳು ಯಾವುವು….? ಇಲ್ಲಿದೆ ಮಾಹಿತಿ

ಸನಾತನ – ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳ ಉಲ್ಲೇಖವಿದೆ. ಬಹುತೇಕ ಜನರು ಇಲ್ಲಿ ‘ಕೋಟಿ’ ಅಂದರೆ ಸಂಖ್ಯೆ ಅಂದುಕೊಂಡಿದ್ದಾರೆ. ಮತ್ತು 33 ಕೋಟಿ ಹೆಸರುಗಳನ್ನು ಹೇಳಿರೆಂದು ತಾಕೀತು ಮಾಡುತ್ತಾರೆ. ವಾಸ್ತವದಲ್ಲಿ, ಈ ‘ಕೋಟಿ’ ಸಂಖ್ಯೆಯನ್ನು ಸೂಚಿಸುವ ಕೋಟಿಯಲ್ಲ. ಸಂಸ್ಕೃತದಲ್ಲಿ ‘ಕೋಟಿ’ ಅಂದರೆ ‘ವಿಧ’, ‘ವರ್ಗ’ ಎಂಬ ಅರ್ಥವೂ ಇದೆ.

ಉದಾ: ಉಚ್ಚಕೋಟಿ. ಇದರ ಅರ್ಥ ಉಚ್ಚ ವರ್ಗಕ್ಕೆ ಸೇರಿದವರು ಎಂದು. ಹಾಗೆಯೇ ಮತ್ತೊಂದು ಉದಾಹರಣೆ : ಸಪ್ತಕೋಟಿ ಬುದ್ಧರು. ಇದರ ಅರ್ಥ, ಏಳು ಪ್ರಧಾನ ಬುದ್ಧರು ಎಂದು.

ಯಜುರ್ವೇದ, ಅಥರ್ವ ವೇದ, ಶತಪಥ ಬ್ರಾಹ್ಮಣ ಮೊದಲಾದ ಪ್ರಾಚೀನ ಕೃತಿಗಳಲ್ಲಿ 33 ವಿಧದ ದೇವತೆಗಳನ್ನು ಉಲ್ಲೇಖಿಸಲಾಗಿದೆ. ಇವರೇ ತ್ರಯತ್ರಿಂಶತಿ ಕೋಟಿ (33 ಕೋಟಿ) ದೇವತೆಗಳು.

ಈಗ ದೇವತೆಗಳ ಈ 33 ವರ್ಗಗಳನ್ನೂ, ಅವುಗಳಲ್ಲಿ ಬರುವ ದೇವತೆಗಳ ಹೆಸರನ್ನೂ ನೋಡೋಣ :

12 ಆದಿತ್ಯರು (ದ್ವಾದಶಾದಿತ್ಯರು) :

1. ತ್ವಷ್ಟ  2. ಪೂಷ  3. ವಿವಸ್ವಾನ್  4. ಮಿತ್ರ  5. ಧಾತಾ  6. ವಿಷ್ಣು   7. ಭಗ  8. ವರುಣ  9. ಸವಿತೃ  10. ಶಕ್ರ  11. ಅಂಶ 12. ಅರ್ಯಮ

11 ರುದ್ರರು (ಏಕಾದಶರುದ್ರಾಃ) :

1. ಮನ್ಯು 2. ಮನು 3. ಮಹಿನಸ 4. ಮಹಾನ್ 5. ಶಿವ 6. ಋತಧ್ವಜ 7. ಉಗ್ರರೇತಾ 8. ಭವ 9. ಕಾಲ 10. ವಾಮದೇವ 11. ಧೃತವೃತ

8 ವಸುಗಳು (ಆಷ್ಟವಸವಃ) :

1. ದ್ರೋಣ 2. ಪ್ರಾಣ 3. ಧ್ರುವ 4. ಅಕ 5. ಅಗ್ನಿ 6. ದೋಷ 7. ವಸು 8. ವಿಭಾವಸು.

ಮತ್ತಿಬ್ಬರು : 1. ಇಂದ್ರ 2.ಪ್ರಜಾಪತಿ

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕ ಚಿಂತಕರು, ಜೋತಿಷ್ಯ ಸಲಹೆಗಾರರು
ಮೊಬೈಲ್:‌ 85489 98564

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...