HomeKarnatakaBREAKING NEWS: ಮರಳು ತುಂಬಿದ್ದ ಟಿಪ್ಪರ್ ಚೇಸಿಂಗ್ ವೇಳೆ ಪಲ್ಟಿಯಾದ ಪೊಲೀಸ್ ಜೀಪ್

BREAKING NEWS: ಮರಳು ತುಂಬಿದ್ದ ಟಿಪ್ಪರ್ ಚೇಸಿಂಗ್ ವೇಳೆ ಪಲ್ಟಿಯಾದ ಪೊಲೀಸ್ ಜೀಪ್

ರಾಯಚೂರು: ಮರಳು ತುಂಬಿದ್ದ ಟಿಪ್ಪರ್ ವಾಹನ ಚೇಸಿಂಗ್ ಮಾಡುವಾಗ ನಿಯಂತ್ರಣ ತಪ್ಪಿ ಪೊಲೀಸ್ ಜೀಪ್ ಪಲ್ಟಿಯಾಗಿ ಬಿದ್ದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.

ಪೊಲೀಸ್ ಜೀಪ್ ಪಲ್ಟಿಯಾಗಿ ಬಿದ್ದ ಪರಿಣಾಮ ಕಾನ್ಸ್ ಟೇಬಲ್ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಸಿಂಧನೂರು ಠಾಣೆಯ ಕಾನ್ಸ್ ಟೇಬಲ್ ಕರಿಯಪ್ಪ, ಹೋಂ ಗಾರ್ಡ್ ಶೆಕ್ಸಾವಲಿ ಗಾಯಗೊಂಡವರು.

ಗಾಯಾಳು ಪೊಲೀಸ್ ಸಿಬ್ಬಂದಿಗಳನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ಗ್ರಾಮಿಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular