HomeKarnatakaBIG NEWS : ರಾಜ್ಯದ ಹಲವೆಡೆ ವರುಣನ ಆರ್ಭಟ ; ಸಿಡಿಲು ಬಡಿದು ಮೂವರು ಸಾವು..!

BIG NEWS : ರಾಜ್ಯದ ಹಲವೆಡೆ ವರುಣನ ಆರ್ಭಟ ; ಸಿಡಿಲು ಬಡಿದು ಮೂವರು ಸಾವು..!

ಬೆಂಗಳೂರು : ರಾಜ್ಯದಲ್ಲಿ ಬಿರು ಬೇಸಿಗೆಯ ನಡುವೆಯೂ, ಹಲವು ಜಿಲ್ಲೆಗಳಲ್ಲಿ ನಿನ್ನೆ ವರುಣನ ಆರ್ಭಟ ಜೋರಾಗಿತ್ತು.

ಶಿವಮೊಗ್ಗ , ಮಡಿಕೇರಿ ಚಿಕ್ಕಮಗಳೂರು , ವಿಜಯಪುರ , ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿನ್ನೆ ಭರ್ಜರಿ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ ಗಾಳಿ , ಗುಡುಗು ಸಹಿತ ಮಳೆಯಾಗಿದೆ. ಚಿಕ್ಕಮಗಳೂರಿನ, ಬಾಳೆಹೊನ್ನೂರು, ಎನ್ಆರ್ಪುರ, ಆವುತಿ, ಬೈಗೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಕೊಡಗಿನ ಹಲವೆಡೆ ಹಗುರ ಮಳೆಯಾಗಿದೆ. ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಡಿಲಿಗೆ ಮೂವರು ಬಲಿ

ವಿಜಯಪುರದಲ್ಲಿ ಸಿಡಿಲಿನ ಜೊತೆ ಭಾರಿ ಮಳೆಯಾಗಿದೆ. ಇಂಡಿ ತಾಲೂಕಿನಲ್ಲಿ 9 ನೇ ತರಗತಿ ವಿದ್ಯಾರ್ಥಿ ಬೀರಪ್ಪ, ಮಸಳಿ ಬಿ ಕೆ ಗ್ರಾಮದಲ್ಲಿ ಸೋಮಶೇಖರ ಕಾಶಿನಾಥ ಪಟ್ಟಣಶೆಟ್ಟಿ (45) ಹಾಗೂ ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿ ಸುನಂದಾ ಶ್ರೀಮಂತ ಡೊಳ್ಳಿ (50) ಎಂಬುವವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular